ಹಾನಗಲ್: ಪೋನ್ ಕದ್ದಾಲಿಕೆಯ ಸಂಸ್ಕೃತಿ ಕಾಂಗ್ರೆಸ್ ಸಂಸ್ಕೃತಿ, ಅದು ಬಿಜೆಪಿ ಪಕ್ಷದ ಸಂಸ್ಕೃತಿ ಅಲ್ಲ ಎಂದು ಶಾಸಕ ಸಿ.ಎಂ. ಉದಾಸಿ ಡಿಕೆ ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿದ್ದಾರೆ.
ಪೋನ್ ಕದ್ದಾಲಿಕೆ ಸಂಸ್ಕೃತಿ ಕಾಂಗ್ರೆಸ್ ಪಕ್ಷದ್ದು: ಡಿಕೆಶಿಗೆ ಟಾಂಗ್ ನೀಡಿದ ಸಿ.ಎಂ. ಉದಾಸಿ - ಪೋನ್ ಕದ್ದಾಲಿಕೆಯ ಸಂಸ್ಕೃತಿ ಕಾಂಗ್ರೆಸ್ ಪಕ್ಷದ್ದು
ನಮ್ಮ ಸರಕಾರಕ್ಕೆ ಅನ್ಯವ್ಯಕ್ತಿಗಳ ಪೋನ್ ಕದ್ದಾಲಿಕೆ ಮಾಡುವ ಅವಶ್ಯಕತೆ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಆರೋಪ ಸತ್ಯಕ್ಕೆ ದೂರವಾದ ಮಾತು ಎಂದು ಸಿ.ಎಂ. ಉದಾಸಿ ತಿಳಿಸಿದರು. ಈಗಾಗಲೇ ರಾಜ್ಯದಲ್ಲಿ ಸರಕಾರ ಜನಪರವಾಗಿ ಕೆಲಸ ಮಾಡುತ್ತಿದೆ. ರಾಜ್ಯದ ಅಭಿವೃದ್ಧಿ ಒಂದೇ ನಮ್ಮ ಧ್ಯೇಯ ಎಂದು ಹೇಳಿದರು.
![ಪೋನ್ ಕದ್ದಾಲಿಕೆ ಸಂಸ್ಕೃತಿ ಕಾಂಗ್ರೆಸ್ ಪಕ್ಷದ್ದು: ಡಿಕೆಶಿಗೆ ಟಾಂಗ್ ನೀಡಿದ ಸಿ.ಎಂ. ಉದಾಸಿ phone-banging culture is Congress cm udasi said](https://etvbharatimages.akamaized.net/etvbharat/prod-images/768-512-8514800-290-8514800-1598093236987.jpg)
ನಮ್ಮ ಸರಕಾರಕ್ಕೆ ಅನ್ಯವ್ಯಕ್ತಿಗಳ ಪೋನ್ ಕದ್ದಾಲಿಕೆ ಮಾಡುವ ಅವಶ್ಯಕತೆ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮಾಡುವ ಆರೋಪ ಸತ್ಯಕ್ಕೆ ದೂರವಾದ ಮಾತು ಎಂದು ಅವರು ತಿಳಿಸಿದರು. ಈಗಾಗಲೇ ರಾಜ್ಯದಲ್ಲಿ ಸರಕಾರ ಜನಪರವಾಗಿ ಕೆಲಸ ಮಾಡುತ್ತಿದೆ. ರಾಜ್ಯದ ಅಭಿವೃದ್ಧಿ ಒಂದೇ ನಮ್ಮ ಧ್ಯೇಯ ಎಂದು ಅವರು ತಿಳಿಸಿದರು.
ಈ ವಿಷಯದ ಕುರಿತು ಇದೀಗ ಚರ್ಚೆಮಾಡುವ ಸಮಯವಲ್ಲ. ರಾಜ್ಯದ ಜನತೆ ಕೋವಿಡ್ನಿಂದ ನಲುಗಿದ್ದಾರೆ. ಅವರ ಯೋಗಕ್ಷೇಮದ ಕಡೆಗೆ ನಮ್ಮ ಗಮನವಿದೆ. ವಿರೋಧ ಪಕ್ಷಗಳಿಗೆ ಸರಕಾರದ ಮೆಲೆ ಆರೋಪ ಮಾಡಲು ಬೇರೆ ವಿಷಯಗಳೇ ಇಲ್ಲ, ಕೇವಲ ಪ್ರಚಾರಕ್ಕಾಗಿ ಮಾಧ್ಯಮದಲ್ಲಿ ಏನೇನೋ ಹೇಳಿಕೆ ನೀಡಿ ಸರಕಾರದ ವಿರುದ್ಧ ಆರೋಪ ಮಾಡುತಿದ್ದಾರೆ ಎಂದು ಹೇಳಿದರು.