ಹಾವೇರಿ: ಲಾಕ್ ಡೌನ್ ನಿಯಮಕ್ಕೆ ಕೇರ್ ಮಾಡದ ಜನರು ಹೊಸರಿತ್ತಿ ಗ್ರಾಮದಲ್ಲಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮುಂದೆ ಜನರು ಹಣ ಪಡೆಯಲು ಮುಗಿಬಿದ್ದಿದ್ದಾರೆ.
500 ರೂಪಾಯಿಗಾಗಿ ಜೀವವನ್ನೂ ಲೆಕ್ಕಿಸದೆ ಬ್ಯಾಂಕ್ ಮುಂದೆ ಜಮಾಯಿಸಿದ ಜನ - news of corona
ಜನಧನ ಖಾತೆಗೆ ಸರ್ಕಾರ ಐನೂರು ರುಪಾಯಿ ಹಣ ಜಮಾ ಮಾಡಿದೆ. ಈ ಹಣವನ್ನ ಪಡೆದುಕೊಳ್ಳಲು ಜನರು ಲಾಕ್ ಡೌನ್ ನಿಯಮವನ್ನ ಉಲ್ಲಂಘಿಸಿ ಬ್ಯಾಂಕ್ ಮುಂದೆ ಜಮಾಯಿಸಿದ್ದಾರೆ.
500 ರೂ ಪಡೆಯಲು ಬ್ಯಾಂಕ್ ಮುಂದೆ ಮುಗಿಬಿದ್ದ ಜನ:
ಜನಧನ ಖಾತೆಗೆ ಸರ್ಕಾರ ಐನೂರು ರುಪಾಯಿ ಹಣ ಜಮಾ ಮಾಡಿದೆ. ಈ ಹಣವನ್ನ ಪಡೆದುಕೊಳ್ಳಲು ಜನರು ಲಾಕ್ ಡೌನ್ ನಿಯಮವನ್ನ ಉಲ್ಲಂಘಿಸಿ ಬ್ಯಾಂಕ್ ಮುಂದೆ ಜಮಾಯಿಸಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ಜಾತ್ರೆಗೆ ಸೇರಿದಂತೆ ಜನರು ಜಮಾಯಿಸಿದ್ದಾರೆ.
ಹೊಸರಿತ್ತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಬ್ಯಾಂಕ್ ಮುಂದೆ ಜಮಾಯಿಸಿದ್ದು, ಬ್ಯಾಂಕ್ ಬಾಗಿಲು ತೆರೆಯುವ ಮುನ್ನವೆ ಬ್ಯಾಂಕ್ ಮುಂದೆ ಕ್ಯೂ ನಿಂತಿದ್ದರು. ಏಕಾಏಕಿ ಸಾಕಷ್ಟು ಸಂಖ್ಯೆಯ ಜನರು ಜಮಾಯಿಸಿದ್ದರಿಂದ ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸಪಡುವ ಪರಿಸ್ಥಿತಿ ನಿರ್ಮಾಣ ಆಗಿದೆ.