ಕರ್ನಾಟಕ

karnataka

ETV Bharat / state

ದನ ಬೆದರಿಸುವ ಸ್ಪರ್ಧೆ ದಿನ 10 ನಿಮಿಷ ಮೌನಾಚರಣೆ ಮಾಡಿ ಪುನೀತ್​​ಗೆ ಶ್ರದ್ಧಾಂಜಲಿ - kulenuru village news

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಆಯೋಜನೆಗೊಂಡಿದ್ದ ದನ ಬೆದರಿಸುವ ಸ್ಪರ್ಧೆ ವೇಳೆ 10 ನಿಮಿಷ ಮೌನಾಚರಣೆ ಮಾಡುವ ಮೂಲಕ ಕನ್ನಡದ ಹೆಸರಾಂತ ನಟ ಪುನೀತ್​ ರಾಜ್​ಕುಮಾರ್​ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯ್ತು.

people pays tribute  for puneeth rajkumar during  cow taming sport
ದನಬೆದರಿಸುವ ಸ್ಪರ್ಧೆ ವೇಳೆ ಪುನೀತ್​ ರಾಜ್​ಕುಮಾರ್​ಗೆ ಶ್ರದ್ಧಾಂಜಲಿ

By

Published : Nov 6, 2021, 7:47 PM IST

ಹಾವೇರಿ:ದನ ಬೆದರಿಸುವ ಸ್ಪರ್ಧೆಗೂ ಮುನ್ನ 10 ನಿಮಿಷ ಮೌನಾಚರಣೆ ಮಾಡುವ ಮೂಲಕ ಅಗಲಿದ ನಟ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರಿಗೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕುಳೇನೂರು ಗ್ರಾಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯ್ತು.

ದನಬೆದರಿಸುವ ಸ್ಪರ್ಧೆ ವೇಳೆ ಪುನೀತ್​ ರಾಜ್​ಕುಮಾರ್​ಗೆ ಶ್ರದ್ಧಾಂಜಲಿ

ಪ್ರತಿವರ್ಷ ದೀಪಾವಳಿಯ ಈ ದಿನಗಳಲ್ಲಿ ಕುಳೇನೂರು ಗ್ರಾಮದಲ್ಲಿ ರಾಜ್ಯಮಟ್ಟದ ದನ ಬೆದರಿಸುವ ಸ್ಪರ್ಧೆ ನಡೆಸಲಾಗುತ್ತೆ. ಅದರಂತೆ ಈ ವರ್ಷ ಸಹ ರಾಜ್ಯಮಟ್ಟದ ದನಬೆದರಿಸುವ ಸ್ಫರ್ಧೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ಪರ್ಧೆ ಆಯೋಜಕರು ದಿ. ನಟ ಪುನೀತ್​ ರಾಜ್​ಕುಮಾರ್​ಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಅವರ ಅಭಿಮಾನಿಗಳು ಅಪ್ಪು ಭಾವಚಿತ್ರ ಹಿಡಿದು ಮೌನಾಚಾರಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸ್ಪರ್ಧೆಗೆ ಬಂದಿದ್ದ ರೈತರು ಸಹ ಕೆಲಕಾಲ ಸ್ಪರ್ಧೆ ನಿಲ್ಲಿಸಿ ಅಗಲಿದ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಮೌನಾಚರಣೆ ನಂತರ ದನ ಬೆದರಿಸುವ ಸ್ಪರ್ಧೆ ನಡೆಸಲಾಯಿತು.

ಇದನ್ನೂ ಓದಿ:ರಾಜ್ಯದ 550 ಚಿತ್ರಮಂದಿರಗಳಲ್ಲಿ 'ಅಪ್ಪು'ಗೆ ಶ್ರದ್ಧಾಂಜಲಿ ಕಾರ್ಯಕ್ರಮ

ABOUT THE AUTHOR

...view details