ಕರ್ನಾಟಕ

karnataka

ETV Bharat / state

ಮಳೆಗಾಲ ಶುರುವಾದರೆ  ಸಾಕು ಇಲ್ಲಿನ ಜನತೆ ಹೊರಗೆ ಕಾಲಿಡಲೂ ಹೆದರ್ತಾರೆ - improper roads,

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಬಂಕಾಪುರದ ದುರ್ಗಾದೇವಿ ಕಾಲನಿಯ ಬೀದಿಗಳಿಗೆ ಸೂಕ್ತವಾದ ರಸ್ತೆ ಇಲ್ಲದ ಕಾರಣ ಮಳೆಗಾಲ ಆರಂಭವಾದರೆ ಸಾಕು ಇಲ್ಲಿಯ ಜನ ಕೆಸರಿನಲ್ಲಿ ಓಡಾಡುವ ಅನಿವಾರ್ಯತೆ ಎದುರಾಗುತ್ತದೆ.

ಮಳೆಗಾಲ ಆರಂಭವಾದರೆ ಸಾಕು ಇಲ್ಲಿನ ಜನತೆ ಹೊರಗೆ ಕಾಲಿಡಲೂ ಪರದಾಡುತ್ತಾರೆ

By

Published : Aug 21, 2019, 2:15 PM IST

ಹಾವೇರಿ:ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರದ ದುರ್ಗಾದೇವಿ ಕಾಲೊನಿಯ ಬೀದಿಗಳಿಗೆ ಸೂಕ್ತವಾದ ರಸ್ತೆ ಇಲ್ಲದ ಕಾರಣ ಮಳೆಗಾಲ ಆರಂಭವಾದರೆ ಸಾಕು ಇಲ್ಲಿಯ ಜನ ಕೆಸರಿನಲ್ಲಿ ಓಡಾಡುವ ಅನಿವಾರ್ಯತೆ ಎದುರಾಗುತ್ತದೆ.

ಹೌದು, 80 ಕ್ಕೂ ಅಧಿಕ ಮನೆಗಳಿರುವ ಈ ಕಾಲೊನಿಗೆ ಸೂಕ್ತ ರಸ್ತೆ ಸೌಲಭ್ಯವಿಲ್ಲದ ಹಿನ್ನೆಲೆ ಮಳೆಗಾಲ ಆರಂಭವಾದರೇ ಸಾಕು ಜನ ಹೊರಗೆ ಕಾಲಿಡಲೂ ಪರದಾಡುವಂತಾಗಿದೆ. ಇನ್ನೂ ವಾಹನಗಳ ಚಲಾವಣೆಯಂತೂ ಸಾಧ್ಯವೇ ಇಲ್ಲದ ಮಾತು.

ಇನ್ನೂ ಎಲ್ಲೆಡೆ ಕೆಸರುಮಯ ವಾತಾವರಣದಿಂದಾಗಿ ಸಾಕಷ್ಟು ಚರ್ಮ ಕಾಯಿಲೆಗಳು ನಮ್ಮನ್ನು ಕಾಡುತ್ತಿವೆ. ಈ ಕುರಿತಂತೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ABOUT THE AUTHOR

...view details