ಕರ್ನಾಟಕ

karnataka

ಬಫರ್​​ ಜೋನ್​ನಲ್ಲಿ ಮಟನ್​ ಮಾರಾಟ... ಬಂದ್​ ಮಾಡುವಂತೆ ಸ್ಥಳೀಯರ ಒತ್ತಾಯ!

By

Published : Jul 8, 2020, 1:29 AM IST

ಗ್ರಾಮದ ಕೆಳಗಿನ ಓಣಿಯಲ್ಲಿ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತೆ ವಾಸವಾಗಿದ್ದ ಪ್ರದೇಶವನ್ನ ಸೀಲ್​ಡೌನ್ ಮಾಡಿ, ಸುತ್ತಮುತ್ತಲಿನ ಇನ್ನೂರು ಮೀಟರ್​ವರೆಗಿನ ಪ್ರದೇಶವನ್ನ ಬಫರ್ ಜೋನ್ ಎಂದು ಘೋಷಿಸಲಾಗಿದೆ.

hanagal
ಬಫರ್​​ ಜೋನ್​ನಲ್ಲಿ ಮಟನ್​ ಮಾರಾಟ

ಹಾವೇರಿ‌ : ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರು ಗ್ರಾಮದ ಬಫರ್ ಜೋನ್​ನಲ್ಲಿ ಮಟನ್ ಮಾರಾಟ ನಡೆಸಲಾಗುತ್ತಿದ್ದು, ಬಂದ್ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಗ್ರಾಮದ ಕೆಳಗಿನ ಓಣಿಯಲ್ಲಿ ಖಾಸಗಿ ಆಸ್ಪತ್ರೆ ಸಿಬ್ಬಂದಿಯೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತೆ ವಾಸವಾಗಿದ್ದ ಪ್ರದೇಶವನ್ನು ಸೀಲ್​ ಡೌನ್ ಮಾಡಿ, ಸುತ್ತಮುತ್ತಲಿನ ಇನ್ನೂರು ಮೀಟರ್​ವರೆಗಿನ ಪ್ರದೇಶವನ್ನ ಬಫರ್ ಜೋನ್ ಎಂದು ಘೋಷಿಸಲಾಗಿದೆ.

ಬಫರ್​​ ಜೋನ್​ನಲ್ಲಿ ಮಟನ್​ ಮಾರಾಟ

ಜಿಲ್ಲಾಡಳಿತದ‌ ಆದೇಶಕ್ಕೆ ಡೋಂಟ್ ಕೇರ್ ಎಂದ ಮಟನ್​ ಅಂಗಡಿ ಮಾಲೀಕರು. ರಾಜಾರೋಷವಾಗಿ ಮಟನ್​ ಮಾರಾಟ ಮಾಡುತ್ತಿದ್ದಾರೆ. ಸ್ಥಳೀಯರು ಮಟನ್​ ಶಾಪ್​ಗೆ ತೆರಳಿ ಬಂದ್‌ ಮಾಡುವಂತೆ ಹೇಳಿದ್ದಕ್ಕೆ ಸ್ಥಳೀಯರ ಜೊತೆ ಅಂಗಡಿಯವರು ಮಾತಿನ ಚಕಮಕಿ ನಡೆಸಿದ್ದಾರೆ.

ABOUT THE AUTHOR

...view details