ಹಾವೇರಿ: ಆಸ್ತಿ ಆಸೆಗೆ ಅಜ್ಜಿಯನ್ನು ಹಿಡಿದು ಮನಬಂದಂತೆ ಅಮಾನವೀಯವಾಗಿ ಎಳೆದಾಡಿರುವ ಘಟನೆ ಹಾವೇರಿಯ ಶಿಗ್ಗಾಂವಿ ತಾಲೂಕಿನ ಮುಗಳೀಕಟ್ಟಿ ಗ್ರಾಮದಲ್ಲಿ ನಡೆಯಿತು. 90 ವರ್ಷದ ಕರೆವ್ವಾ ಮಾದರ ಎಂಬಾಕೆಯನ್ನು ಸ್ವಸಮಾಜದವರೇ ಎಳೆದಾಡಿದರು. ಘಟನೆಯ ವಿಡಿಯೋ ವೈರಲ್ ಆಗಿದೆ.
ಕರೆವ್ವಾ ಮಾದರ ಅನಾಥೆ. ಅವರಿಗೆ ಗ್ರಾಮದ ಖಾಜಾಮೋದ್ಧೀನ್ ಬುಡ್ನೇವರ ಆಶ್ರಯ ನೀಡಿದ್ದಾರೆ ಎನ್ನಲಾಗಿದೆ. ಈಕೆ ಅನ್ಯಕೋಮಿನವರ ಆಶ್ರಯ ಪಡೆದಿದ್ದಕ್ಕೆ ಮತ್ತು ಆಸ್ತಿ ವಿಚಾರಕ್ಕೆ ಈ ರೀತಿ ವರ್ತಿಸಿದ್ದಾರೆ ಎಂದು ಹೇಳಲಾಗುತ್ತಿದೆ.