ಹಾನಗಲ್(ಹಾವೇರಿ) :ಬಸ್ ನಿಲ್ದಾಣದಲ್ಲಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥನನ್ನ ಶುಚಿಗೊಳಿಸುವುದರ ಮೂಲಕ ಸಂಘಟನೆಯೊಂದರ ಯುವಕರು ಮಾನವೀಯತೆ ಮೆರೆದಿದ್ದಾರೆ.
ಅರೆಬೆತ್ತಲೆ ತಿರುಗುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಶುಚಿಗೊಳಿಸಿದ ಹಾನಗಲ್ ಯುವಕರು - Haveri news
ಅಕ್ಕಿಆಲೂರ ಗ್ರಾಮದ ಬಸ್ ನಿಲ್ದಾಣದಲ್ಲಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥನನ್ನ ಹಿಡಿದು ಸ್ನಾನ ಮಾಡಿಸಿದ್ದಲ್ಲದೇ ಸಂಪೂರ್ಣ ಆತನನ್ನ ಶುಚಿಗೊಳಿದ್ದಾರೆ ಸ್ಥಳೀಯ ಯುವಕರು.

ಹಾನಗಲ್
ಮಾನಸಿಕ ಅಸ್ವಸ್ಥನನ್ನು ಶುಚಿಗೊಳಿಸಿದ ಯುವಕರು
ಹಾನಗಲ್ ತಾಲೂಕಿನ ಅಕ್ಕಿಆಲೂರ ಗ್ರಾಮದ ಬಸ್ ನಿಲ್ದಾಣದಲ್ಲಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥನನ್ನ ಹಿಡಿದು ಸ್ನಾನ ಮಾಡಿಸಿ, ಶುಚಿಗೊಳಿಸಿ,ಹೊಸಬಟ್ಟೆಗಳನ್ನ ತೊಡಿಸುವುದರ ಮೂಲಕ ಇಲ್ಲಿನ ಹಿಂದು ಸಂಘಟನೆಯ ಯುವಕರು ಮಾನವೀಯತೆ ಮೆರೆದ ವಿಡಿಯೋ ಇದೀಗ ವೈರಲ್ ಆಗಿದೆ.
ಸುಮಾರು 25 ವಯಸ್ಸಿನ ಯುವಕ ಭಾಷೆ ಬರದೆ ಅರೇ ಬೆತ್ತಲೆಯಾಗಿ ಓಡಾಡುವುದನ್ನ ಕಂಡ ಇಲ್ಲಿನ ಯುವಕರು ಸಮೀಪದ ಕೆರೆಗೆ ಕರೆದುಕೊಂಡು ಹೋಗಿ ಶುಚಿಗೊಳಿಸಿದ್ದಾರೆ.