ಹಾವೇರಿ: ಕಾವಿ ತೊಟ್ಟು ಜನರನ್ನು ವಂಚಿಸುತ್ತಿದ್ದ ಇಬ್ಬರನ್ನು ಹಿಡಿದ ಗ್ರಾಮಸ್ಥರು ಧರ್ಮದೇಟು ನೀಡಿದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಾರಡಗಿ ಗ್ರಾಮದಲ್ಲಿ ನಡೆದಿದೆ. ಜೇಕಿನಕಟ್ಟಿ ರಸ್ತೆಯಲ್ಲಿ ಗ್ರಾಮಸ್ಥರಿಂದ ಏಟು ತಿಂದವರನ್ನು ವಿಜಯನಗರ ಮೂಲದವರು ಎಂದು ಗುರುತಿಸಲಾಗಿದೆ.
ಆರೋಪಿಗಳು ಹಣ ಸಂಗ್ರಹವಾಗುತ್ತಿದ್ದಂತೆ ಗ್ರಾಮದ ಹೊರಗೆ ಬಂದು ಕಾವಿ ಕಳಚಿಟ್ಟು ಬೇರೆ ಬಟ್ಟೆ ತೊಟ್ಟು ಓಡಾಡುತ್ತಿದ್ದರು. ಮಾದಾಪುರ, ಕಾರಡಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನರ ಮನೆಗಳಿಗೆ ತೆರಳಿ ಹಣ ಸಂಗ್ರಹಿಸುತ್ತಿದ್ದರು. ನಂತರ ಊರ ಹೊರಗೆ ಬಂದು ಜನಸಾಮಾನ್ಯರಂತೆ ಪ್ಯಾಂಟ್, ಶರ್ಟ್ ಧರಿಸಿ ಓಡಾಡುತ್ತಿದ್ದರು ಎಂದು ಸಾರ್ವಜನಿಕರು ತಿಳಿಸಿದ್ದಾರೆ.