ರಾಣೇಬೆನ್ನೂರು: ಕೊರೊನಾ ಬಗ್ಗೆ ಸಾರ್ವಜನಿಕರ ಜಾಗೃತಿ ಮೂಡಿಸುವ ಸಮಯದಲ್ಲಿ ಶಾಸಕ ಅರುಣ್ ಕುಮಾರ್ ಪೂಜಾರ ಮಾಸ್ಕ್ ಧರಿಸದೇ ಇರುವುದರಿಂದ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಸ್ಕ್ ಧರಿಸದೇ ಜಾಗೃತಿ ಮೂಡಿಸಿದ ಶಾಸಕ: ಜನರ ಆಕ್ರೋಶ - ಮಾಸ್ಕ್ ಹಾಕಿಕೊಳ್ಳದೆ ಜಾಗೃತಿ ಮಾಡಿದ ಶಾಸಕ ಅರುಣ್ ಕುಮಾರ್ ಪೂಜಾರ
ಶಾಸಕ ಅರುಣ್ ಕುಮಾರ್ ಪೂಜಾರ ಅವರು ತಾಲೂಕಿನ ಮೈದೂರು, ಗಂಗಾಪುರ, ಗುಡಗೂರ ಗ್ರಾಮಗಳಿಗೆ ತೆರಳಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಹೋದಾಗ ಮಾಸ್ಕ್ ಹಾಕಿಕೊಳ್ಳದೆ ಜನರಿಗೆ ಜಾಗೃತಿ ಮೂಡಿಸುತ್ತಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ.
ಮಾಸ್ಕ್ ಧರಿಸದೆ ಜಾಗೃತಿ ಮಾಡಿದ ಶಾಸಕ
ಶಾಸಕ ಪೂಜಾರ ತಾಲೂಕಿನ ಮೈದೂರು, ಗಂಗಾಪುರ, ಗುಡಗೂರು ಗ್ರಾಮಗಳಿಗೆ ತಮ್ಮ ಬೆಂಬಲಿಗರೊಂಗೆ ತೆರಳಿ ತೆರಳಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ತೆರಳಿದ್ದರು.ಈ ಸಮಯದಲ್ಲಿ ಅವರು ಮಾಸ್ಕ್ ಹಾಕಿಕೊಳ್ಳದೇ ಜನರಿಗೆ ಜಾಗೃತಿ ಮೂಡಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ.
ಇದಕ್ಕೆ ಹಲವರು ಕಮೆಂಟ್ ಮಾಡಿದ್ದು, ದೇಶದ ಪ್ರಧಾನಿ ಅಂತರ ಕಾಯ್ದುಕೊಳ್ಳಿ ಎಂದು ಹೇಳಿದ್ದಾರೆ. ಆದರೆ ಅವರ ಪಕ್ಷದ ಶಾಸಕ ಯಾವುದೇ ಅಂತರವಿಲ್ಲದೆ, ಮಾಸ್ಕ್ ಇಲ್ಲದೇ ಜನರಲ್ಲಿ ಜಾಗೃತಿ ಮೂಡಿಸುವ ಜ್ಞಾನವಿಲ್ಲದೆ ಶಾಸಕ ಎಂದು ಕಮೆಂಟ್ ಹಾಕಿದ್ದಾರೆ.