ಕರ್ನಾಟಕ

karnataka

By

Published : May 7, 2020, 3:37 PM IST

ETV Bharat / state

ಮಾಸ್ಕ್ ಹಾಕಿಕೊಳ್ಳದವರಿಗೆ ಪೊಲೀಸರಿಂದ ದಂಡದ ಅಸ್ತ್ರ...!

ಲಾಕ್‌ಡೌನ್ ಜಾರಿ ಹಿನ್ನೆಲೆಯಲ್ಲಿ ಜನತೆ ಮಾಸ್ಕ್ ಧರಿಸದಿದ್ದರೆ ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳದಿದ್ದರೆ ಜನರಿಗೆ ಪೊಲೀಸರಿಂದ ದಂಡ ವಿಧಿಸಲಾಗುತ್ತದೆ.

Penalties by police for not wearing a mask
ಮಾಸ್ಕ್ ಹಾಕಿಕೊಳ್ಳದವರಿಗೆ ಪೋಲಿಸರಿಂದ ದಂಡ

ರಾಣೆಬೆನ್ನೂರು: ಲಾಕ್‌ಡೌನ್ ಜಾರಿ ಹಿನ್ನೆಲೆಯಲ್ಲಿ ಜನತೆ ಮಾಸ್ಕ್ ಧರಿಸದಿದ್ದರೆ ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳದಿದ್ದರೆ ದಂಡ ಬೀಳುತ್ತೆ. ಇದಕ್ಕೂ ಕೇರ್ ಮಾಡದಿದ್ದರೆ ಕೇಸ್ ಬೀಳುವುದು ಗ್ಯಾರಂಟಿಯಾಗಿದೆ. ಆದ್ದರಿಂದ ಮನೆಯಿಂದ ಹೊರಗೆ ಬರುವ ಜನತೆಗೆ ಪೊಲೀಸರು ದಂಡ ಪ್ರಯೋಗ ನಡೆಸಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣ ಪತ್ತೆಯಾದ ಮತ್ತು ಪಕ್ಕದ ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚಿನ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿಯ ಜನತೆ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕಾಗಿದ್ದು, ಮತ್ತು ಪರಸ್ಪರ ಅಂತರ ಕಾಯ್ದುಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಮಾಸ್ಕ್ ಹಾಕಿಕೊಳ್ಳದವರಿಗೆ ಪೊಲೀಸರಿಂದ ದಂಡ

ಸರ್ಕಾರದ ನಿಯಮ ಉಲ್ಲಂಘಿಸಿದರೆ ಮೊದಲಿಗೆ 100 ರೂ. ದಂಡ ಹಾಕುತ್ತಾರೆ. ಅದೇ ವ್ಯಕ್ತಿಗೆ ಮೂರು ಬಾರಿ ದಂಡ ವಿಧಿಸಿದರೂ ಕ್ಯಾರೇ ಎನ್ನದಿದ್ದರೆ, ಕೋವಿಡ್-19 ಸಾಂಕ್ರಾಮಿಕ ರೋಗದ ಮುಂಜಾಗ್ರತಾ ಕ್ರಮ ಉಲ್ಲಂಘನೆ ಆರೋಪದಡಿ ಅಂತಹವರ ವಿರುದ್ಧ ದೂರು ದಾಖಲಿಸಿ, ಜೈಲಿಗೆ ಅಟ್ಟಲಾಗುತ್ತದೆ.

ಇನ್ನು ಸರ್ಕಾರದ ನಿಯಮದ ಕಟ್ಟುನಿಟ್ಟಿನ ಪಾಲನೆಗೆ ಮುಂದಾಗಿರುವ ನಗರಸಭೆ ಆಯುಕ್ತ ಡಾ. ಎನ್. ಮಹಾಂತೇಶ್​ ಹಾಗೂ ಡಿವೈಎಸ್ಪಿ ಟಿ.ವಿ. ಸುರೇಶ್​ ಬುಧವಾರ ಒಂದೇ ದಿನ ಮಾಸ್ಕ್ ಧರಿಸದ ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳದ 95 ಜನರಿಗೆ ತಲಾ ಒಬ್ಬರಿಗೆ 100 ರೂ.ರಂತೆ ದಂಡ ವಿಧಿಸಿದ್ದು 9,500 ರೂ. ವಸೂಲಿ ಮಾಡಿದ್ದಾರೆ.

ABOUT THE AUTHOR

...view details