ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಹೊರವಲಯದ ಅಡಿಕೆ ತೋಟದಲ್ಲಿ ಹಲವು ಮಠಾಧೀಶರ ಸಾನಿಧ್ಯದಲ್ಲಿ ಪಾಪು ಅವರ ಅಂತ್ಯಕ್ರಿಯೆ ನೆರವೇರಿತು.
ನಾಡೋಜ ಕನ್ನಡದ ಕಟ್ಟಾಳು ಪಾಟೀಲ ಪುಟ್ಟಪ್ಪ ವಿಭೂತಿಯಲ್ಲಿ ಲೀನ - ಪಾಟೀಲ್ ಪುಟ್ಟಪ್ಪ ಅವರ ಅಂತ್ಯಕ್ರಿಯೆ
ಪಾಟೀಲ್ ಪುಟ್ಟಪ್ಪ ಅವರ ಅಂತ್ಯಕ್ರಿಯೆ ಹಾವೇರಿಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಅಡಿಕೆ ತೋಟದಲ್ಲಿ ನಡೆಯಿತು.
ಪಾಟೀಲ್ ಪುಟ್ಟಪ್ಪ ವಿಭೂತಿಯಲ್ಲಿ ಲೀನ
ಸಿರಿಗೆರೆ ಶಿವಮೂರ್ತಿಸ್ವಾಮೀಜಿ, ಸಾಣೆಹಳ್ಳಿ ಶಿವಕುಮಾರ್ ಸ್ವಾಮೀಜಿ, ಡಂಬಳ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ.ಪಾಟೀಲ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಸಾಹಿತಿಗಳು, ಗ್ರಾಮಸ್ಥರು ಭಾಗಿಯಾಗುವ ಮೂಲಕ ಅಶ್ರುತರ್ಪಣ ಸಲ್ಲಿಸಿದರು. ಸಕಲ ಸರ್ಕಾರಿ ಗೌರವದೊಂದಿಗೆ ಪಾಟೀಲ್ ಪುಟ್ಟಪ್ಪ ಅವರಿಗೆ ವಿದಾಯ ಹೇಳಲಾಯಿತು.