ರಾಣೆಬೆನ್ನೂರು:ನಾಡೋಜ ಪಾಟೀಲ ಪುಟ್ಟಪ್ಪ ನೆನಪಿಗಾಗಿ ಹುಬ್ಬಳ್ಳಿ ಕಿಮ್ಸ್ಗೆ ಅವರ ಹೆಸರನ್ನು ನಾಮಕರಣ ಮಾಡಲು ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದಲ್ಲಿ ಚರ್ಚಿಸುವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಪಾಟೀಲ ಪುಟ್ಟಪ್ಪರ ನೆನಪಿಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ 'ಪಾಪು' ಹೆಸರು ನಾಮಕರಣ - Agriculture Minister B.C.Patil
ಪಾಟೀಲ ಪುಟ್ಟಪ್ಪ ಹೆಸರು ಅಮರವಾಗಿರಲು ಕಿಮ್ಸ್ ಆಸ್ಪತ್ರೆಗೆ ಪಾಪು ಹೆಸರು ನಾಮಕರಣ ಮಾಡುವ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸುವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಕೃಷಿ ಸಚಿವ ಬಿ.ಸಿ.ಪಾಟೀಲ್
ಪಾಟೀಲ ಪುಟ್ಟಪ್ಪ ಅವರ ಅಂತ್ಯಕ್ರಿಯೆಯಲ್ಲಿ ಮಾತನಾಡಿದ ಅವರು, ಪಾಪು ಕನ್ನಡದ ಗಟ್ಟಿ ಧ್ವನಿಯಾಗಿದ್ರು. ಇಂದು ಆ ಗಟ್ಟಿ ಧ್ವನಿ ಸ್ತಬ್ದವಾಗಿದೆ. ನಾನು ಸಚಿವರಾಗಬೇಕು ಎಂಬ ಆಸೆ ತುಂಬಾ ಇತ್ತು. ಸಚಿವನಾದ ನಂತರ ಅವರನ್ನ ಮಾತನಾಡಿಸಲು ಹೋದಾಗ ಅವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಎಂದರು.