ರಾಣೆಬೆನ್ನೂರು (ಹಾವೇರಿ): ಚಿಕ್ಕಮಕ್ಕಳಿಗೆ ರೋಗ ನಿರೋಧಕ ಚುಚ್ಚುಮದ್ದು ನೀಡಲು ಹೆರಿಗೆ ಆಸ್ಪತ್ರೆ ಸಿಬ್ಬಂದಿ ಪೋಷಕರನ್ನು ಗಂಟೆಗಟ್ಟಲೆ ಕಾಯಿಸಿ ನಿಲ್ಲಿಸಿದ ಘಟನೆ ರಾಣೆಬೆನ್ನೂರು ನಗರದ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ.
ಚಿಕ್ಕಮಕ್ಕಳಿಗೆ ರೋಗನಿರೋಧಕ ಚುಚ್ಚುಮದ್ದುಗಳಾದ ಬಿಸಿಜಿ, ಡಿಟಿಪಿ, ಪೋಲಿಯೋ, ಟಿಟಿಗಳನ್ನು ಹುಟ್ಟಿನಿಂದ 5 ವರ್ಷದವರೆಗೆ ನೀಡಲಾಗುತ್ತದೆ. ಕೊರೊನಾ ಭಯದ ನಡುವೆ ಪೋಷಕರು ಬೆಳಗ್ಗೆ 8 ಗಂಟೆಗೆ ಕಂದಮ್ಮಗಳನ್ನು ಕರೆದುಕೊಂಡು ಆಸ್ಪತ್ರೆಗೆ ಬಂದಿದ್ದಾರೆ.
ಚಿಕ್ಕಮಕ್ಕಳ ರೋಗನಿರೋಧಕ ಚುಚ್ಚುಮದ್ದಿಗಾಗಿ ಆಸ್ಪತ್ರೆಯಲ್ಲಿ ಕಾದು ಸುಸ್ತಾದ ಪೋಷಕರು ಆದರೆ ಆಸ್ಪತ್ರೆ ಸಿಬ್ಬಂದಿ ಮಕ್ಕಳಿಗೆ ಚುಚ್ಚುಮದ್ದು ನೀಡಲು ಗಂಟೆಗಟ್ಟಲೆ ನಿಲ್ಲಿಸಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಪುಟ್ಟ ಕಂದಮ್ಮಗಳನ್ನು ಎತ್ತಿಕೊಂಡು ಪೋಷಕರು ಕುಳಿತಿದ್ದ ದೃಶ್ಯ ಕಂಡುಬಂದಿತು. ಇದರ ಬಗ್ಗೆ ಯಾವೊಬ್ಬ ಅಧಿಕಾರಿಯೂ ಸಹ ಕಾಳಜಿ ವಹಿಸದೆ ಇರುವುದನ್ನು ನೋಡಿದರೆ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿತ್ತು.
ಇಂದು ನೂರಾರು ಪೋಷಕರು ಒಮ್ಮೆಲೆ ಆಸ್ಪತ್ರೆಗೆ ಬಂದ ಕಾರಣ ಲಸಿಕೆಗೆ ಕೊರತೆಯಾಗಿದೆ ಎಂದು ಪೋಷಕರೊಬ್ಬರು ಹೇಳಿದ್ದಾರೆ.