ಕರ್ನಾಟಕ

karnataka

ETV Bharat / state

ಕಲಾ ಪ್ರದರ್ಶನಕ್ಕೆ ಅವಕಾಶ ನೀಡಿ: ಸರ್ಕಾರಕ್ಕೆ ಜೇವರ್ಗಿ ಪಂಚಾಕ್ಷರ ನಾಟ್ಯ ಸಂಘದ ಮನವಿ - ಸಂಕಷ್ಟಕ್ಕೆ ಸಿಲುಕಿದ ನಾಟಕ ಕಂಪನಿಗಳು

ಕೋವಿಡ್​​ ಮೊದಲ ಮತ್ತು 2ನೇ ಅಲೆಗಳಿಂದ ಕಲಾವಿದರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವೆ. 3ನೇಯ ಅಲೆಯಲ್ಲಿ ತಮ್ಮ ಕಲಾ ಸೇವೆಗೆ ತೊಂದರೆಯಾದರೆ ಬಡ ಕಲಾವಿದರು, ಬಡಕಂಪನಿಗಳ ಪಾಡೇನು ಎಂದು ಕಲಾವಿದರು ಪ್ರಶ್ನಿಸುತ್ತಿದ್ದಾರೆ.

Panchakshari Natya Sangha appeals to the govt
ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘ ಜೇವರ್ಗಿ

By

Published : Jan 18, 2022, 8:45 AM IST

ಹಾವೇರಿ: ಕೊರೊನಾ ಹಾಗೂ ಒಮಿಕ್ರಾನ್ ಹರಡುವಿಕೆ ತಡೆಗಟ್ಟಲು ಸರ್ಕಾರ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಅದರಲ್ಲಿಯೂ ಜನ ಸೇರುವಂತಹ ಜಾತ್ರೆ, ಸಮಾವೇಶಗಳಿಗೆ ಕಡಿವಾಣ ಹಾಕಿದೆ. ಇದರ ಬೆನ್ನಲ್ಲೇ ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳು ರದ್ದಾಗಿದ್ದು, ಇನ್ನು ಕೆಲವು ಜಾತ್ರೆಗಳನ್ನು ಸರಳ ಮತ್ತು ಸಂಪ್ರದಾಯ ಬದ್ದವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಕಲೆ ಪ್ರದರ್ಶನಕ್ಕೆ ಅವಕಾಶ ನೀಡಿ: ಸರ್ಕಾರಕ್ಕೆ ಜೇವರ್ಗಿಯ ಪಂಚಾಕ್ಷರ ನಾಟ್ಯ ಸಂಘ ಮನವಿ

ಆದರೆ, ಉತ್ತರ ಕರ್ನಾಟಕದ ದೊಡ್ಡ ಜಾತ್ರೆಗಳನ್ನೇ ಅವಲಂಬಿಸಿರುವ ಹಲವು ನಾಟಕ ಕಂಪನಿಗಳು ಇದೀಗ ಸಂಕಷ್ಟಕ್ಕೆ ಸಿಲುಕಿವೆ. ಅದರಲ್ಲಿಯೂ ಬಾಗಲಕೋಟೆ ಜಿಲ್ಲೆಯ ಬದಾಮಿ ಬನಶಂಕರಿ ಜಾತ್ರೆ ರದ್ದಾಗಿರುವುದು ನಾಟಕ ಕಂಪನಿಗಳಿಗೆ ಇನ್ನಿಲ್ಲದ ಹಾನಿ ತಂದಿದೆ.

ಕಲಾವಿದರ ವೇತನ, ಕೂಲಿ ಕಾರ್ಮಿಕರ ಕೂಲಿಯನ್ನ ಹೇಗೆ ಭರಿಸಬೇಕು ಎನ್ನುವ ಚಿಂತೆಯಲ್ಲಿ ನಾಟಕ ಕಂಪನಿ ಮಾಲೀಕರು ಸಿಲುಕಿದ್ದಾರೆ. ಈ ಮಧ್ಯೆ ಹಾವೇರಿ ನಗರದಲ್ಲಿ ಬೀಡುಬಿಟ್ಟಿರುವ ಜೇವರ್ಗಿ ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘ ಬನಶಂಕರಿ ಜಾತ್ರೆ ರದ್ದತಿಯಿಂದ ಹಾವೇರಿಯಲ್ಲಿಯೇ ಮುಂದಿನ ಆಟಗಳ ಪ್ರದರ್ಶನಕ್ಕೆ ಮುಂದಾಗಿದೆ.

ಜ.19 ರಿಂದ ದಿನಕ್ಕೆ ಎರಡು ಆಟಗಳ ಪ್ರದರ್ಶನ:

ಈ ಹಿನ್ನೆಲೆ ನಾಟ್ಯ ಸಂಘದ ಕಲಾವಿದರು ತಾಲೀಮು ನಡೆಸಿದ್ದು, ಜ.19 ರಿಂದ ದಿನಕ್ಕೆ ಎರಡು ಆಟಗಳ ಪ್ರದರ್ಶನಕ್ಕೆ ನಾಟ್ಯ ಸಂಘ ಸಜ್ಜಾಗಿದೆ. ಇದರ ಜತೆಗೆ ನಾಟಕ ಸಂಘ ಕಲಾಭಿಮಾನಿಗಳಿಗೆ ಕೊರೊನಾ ಕುರಿತಂತೆ ಜಾಗೃತಿ ಮೂಡಿಸುವ ಚಿಂತನೆಯಲ್ಲಿದೆ. ಸರ್ಕಾರ ನಿಗದಿಪಡಿಸಿರುವ ಪ್ರತಿ ಶತ 50 ಆಸನಗಳ ಬದಲು ಪ್ರತಿಶತ 30 ಆಸನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಪ್ರತಿ ಬಾರಿ ಆಟ ಮುಗಿದಾಗ ನಾಟಕ ಟೆಂಟ್ ಪೂರ್ತಿಯಾಗಿ ಸ್ಯಾನಿಟೈಸರ್​​ ಮಾಡುವ ಮತ್ತು ಪ್ರತಿಯೊಬ್ಬ ಪ್ರೇಕ್ಷಕ ಸಹ ಮಾಸ್ಕ್ ಧರಿಸಿ ಬರುವಂತೆ ಮನವಿ ಮಾಡಿದೆ. ಆದ್ಯಾಗ್ಯೂ ನಾಟಕ ನೋಡಲು ಪ್ರೇಕ್ಷಕರು ಮಾಸ್ಕ್ ಇಲ್ಲದೇ ಬಂದರೆ ಉಚಿತ ಮಾಸ್ಕ್ ನೀಡಲು ಸಂಘ ಮುಂದಾಗಿದೆ.

ಈಗಾಗಲೇ ಕೋವಿಡ್​​ ಮೊದಲ ಮತ್ತು 2ನೇ ಅಲೆಗಳಿಂದ ಕಲಾವಿದರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವೆ. 3ನೇಯ ಅಲೆಯಲ್ಲಿ ತಮ್ಮ ಕಲಾ ಸೇವೆಗೆ ತೊಂದರೆಯಾದರೆ ಬಡ ಕಲಾವಿದರು, ಬಡಕಂಪನಿಗಳ ಪಾಡೇನು ಎಂದು ಕಲಾವಿದರು ಪ್ರಶ್ನಿಸುತ್ತಿದ್ದಾರೆ.

ಕಲೆ ಪ್ರದರ್ಶನಕ್ಕೆ ಅವಕಾಶ ನೀಡಿ, ಪರಿಹಾರ ಬೇಡ:

ಸರ್ಕಾರ ಮೊದಲನೇಯ ಅಲೆಯಲ್ಲಿ 2 ಸಾವಿರ ರೂ. ಹಾಗೂ 2ನೇಯ ಅಲೆಯಲ್ಲಿ 3 ಸಾವಿರ ರೂ.ಪರಿಹಾರ ನೀಡಿತ್ತು. ಅದರಿಂದ ಜೀವನ ನಡೆಸುವದು ಕಷ್ಟ. ಕಲಾವಿದರ ಕಲೆ ಪ್ರದರ್ಶನಕ್ಕೆ ಅವಕಾಶ ನೀಡಿದರೆ ಸಾಕು ನಮಗೆ ಸರ್ಕಾರದಿಂದ ಯಾವುದೇ ಪರಿಹಾರ ಧನ ಬೇಡ ಎನ್ನುತ್ತಿದ್ದಾರೆ ಕಲಾವಿದರು.

ನಮ್ಮ ಕೆಲಸ ಅಂದರೆ ಪ್ರೇಕ್ಷಕರು, ಅಭಿಮಾನಿಗಳ ರಂಜನೆ. ಈ ಕೆಲಸ ಬಿಟ್ಟು ಬೇರೆ ಯಾವ ಕೆಲಸ ನಮಗೆ ತಿಳಿದಿಲ್ಲ. ಆದ್ದರಿಂದ ಕಲಾ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಬೇಕು. ಸರ್ಕಾರ ನೀಡುವ ಕೋವಿಡ್​​ ನಿಯಮ ಪಾಲನೆ ಮಾಡುವ ಜತೆಗೆ ಪ್ರದರ್ಶನಕ್ಕೆ ಕಲಾಭಿಮಾನಿಗಳು ಆಶೀರ್ವಾದ ಮಾಡುವಂತೆ ಕಲಾವಿದರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:'ಭಾರತದಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯ': ವಿಶ್ವ ಆರ್ಥಿಕ ವೇದಿಕೆ ಉದ್ದೇಶಿಸಿ ಮೋದಿ ಭಾಷಣ

ABOUT THE AUTHOR

...view details