ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕು ಮಲಗುಂದ ಗ್ರಾಮದಲ್ಲಿ ಭತ್ತದ ಬೆಳೆ ಬೆಳೆದರೂ ಕಾಳುಕಟ್ಟದೆ ಇರುವ ಅಂಶ ಪತ್ತೆಯಾಗಿದೆ. ಗ್ರಾಮದ ರವಿ ಕಾಗಿನೆಲೆ ಎಂಬುವವರು ನಾಲ್ಕು ಎಕರೆಯಲ್ಲಿ ಭತ್ತದ ನಾಟಿ ಮಾಡಿದ್ದರು. ಆದರೆ, ನಾಟಿ ಮಾಡಿ ನಾಲ್ಕು ತಿಂಗಳಾದರೂ ತೆನೆ ಬಂದಿಲ್ಲ. ಮೂರು ಅಡಿವರೆಗೆ ಬೆಳೆ ಬೆಳೆದು ನಿಂತಿದೆ.
ರವಿ ಕಾಗಿನೆಲೆ ಅವರ ಸುತ್ತಮುತ್ತಲಿನ ಜಮೀನುಗಳಲ್ಲಿರುವ ಇತರೆ ರೈತರು ಭತ್ತ ಬೆಳೆದು ಮತ್ತೆ ನಾಟಿ ಮಾಡಲು ಮುಂದಾಗಿದ್ದಾರೆ. ಆದರೆ, ರವಿ ಕಾಗಿನೆಲೆ ಅವರ ಭತ್ತ ಫಸಲು ಕಟ್ಟಿಲ್ಲ. ಎಲ್ಲರಂತೆ ಭತ್ತಕ್ಕೆ ಗೊಬ್ಬರ ಹಾಕಿದ್ದೇನೆ. ಅಲ್ಲದೆ, ಔಷಧಿ ಸಹ ಸಿಂಪಡಿಸಿದ್ದೇನೆ. ಆದರೆ, ಬೆಳೆದಿದ್ದು ಬಿಟ್ಟರೆ ತೆನೆ ಕಟ್ಟಿಲ್ಲ ಎಂದು ಅವರು ಹೇಳಿದರು.