ಕರ್ನಾಟಕ

karnataka

ETV Bharat / state

ಬೆಡ್​ ಖಾಲಿ ಇದ್ರೂ ನೆಲದ ಮೇಲೆ ಸೋಂಕಿತರಿಗೆ ಆಮ್ಲಜನಕ : ಏನಿದು ಸಾರ್ವಜನಿಕರ ಆಸ್ಪತ್ರೆ ಅವ್ಯವಸ್ಥೆ - ಕೊರೊನಾ

ಇಂದು ವಾಸ್ತವವಾಗಿ ಪ್ರತ್ಯಕ್ಷವಾಗಿ ಆಸ್ಪತ್ರೆಗೆ ಭೇಟಿ ನೀಡಿದ ಸಮಯದಲ್ಲಿ ಆಸ್ಪತ್ರೆಯಲ್ಲಿ ಸುಮಾರು ಆರು ಬೆಡ್​ ಖಾಲಿ‌ ಇದ್ದರೂ ಸಹ ವೈದ್ಯರು ಮಾತ್ರ ರೋಗಿಗಳನ್ನು ಬೆಡ್ ಮೇಲೆ ಶಿಫ್ಟ್‌ ಮಾಡಿಲ್ಲ..

ಬೆಡ್​ ಖಾಲಿ ಇದ್ರೂ ನೆಲದ ಮೇಲೆ ಸೋಂಕಿತರಿಗೆ ಆಮ್ಲಜನಕ
ಬೆಡ್​ ಖಾಲಿ ಇದ್ರೂ ನೆಲದ ಮೇಲೆ ಸೋಂಕಿತರಿಗೆ ಆಮ್ಲಜನಕ

By

Published : May 28, 2021, 5:12 PM IST

ರಾಣೆಬೇನ್ನೂರು: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಡ್​ಗಳು ಖಾಲಿ ಇದ್ರೂ ಸಹ ವೈದ್ಯರು ಕೊರೊನಾ ಸೋಂಕಿತರಿಗೆ ನೆಲದ ಮೇಲೆ ಚಿಕಿತ್ಸೆ ನೀಡುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ.

ಬೆಡ್​ ಖಾಲಿ ಇದ್ರೂ ನೆಲದ ಮೇಲೆ ಸೋಂಕಿತರಿಗೆ ಆಮ್ಲಜನಕ

ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹೆಚ್ಚಳವಾಗುತ್ತಿದ್ದು, ಕೆಲವರು ತೀವ್ರ ಉಸಿರಾಟದ ತೊಂದರೆಯಿಂದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಈ ಸಮಯದಲ್ಲಿ ಆಸ್ಪತ್ರೆಯ ಎಲ್ಲಾ ಬೆಡ್​ಗಳು ಭರ್ತಿಯಾಗಿವೆ ಎಂದು ವೈದ್ಯರು ಹೇಳಿ ಕೊರೊನಾ ರೋಗಿಗಳಿಗೆ ಆಕ್ಸಿಜನ್ ಕನ್ಸ್​ಟ್ರೆಂಟರ್ ಹಾಕಿ ನೆಲದ ಮೇಲೆ‌ ಚಿಕಿತ್ಸೆ ನೀಡಲಾಗುತ್ತಿದೆ.

ಆದರೆ, ಇಂದು ವಾಸ್ತವವಾಗಿ ಪ್ರತ್ಯಕ್ಷವಾಗಿ ಆಸ್ಪತ್ರೆಗೆ ಭೇಟಿ ನೀಡಿದ ಸಮಯದಲ್ಲಿ ಆಸ್ಪತ್ರೆಯಲ್ಲಿ ಸುಮಾರು ಆರು ಬೆಡ್​ ಖಾಲಿ‌ ಇದ್ದರೂ ಸಹ ವೈದ್ಯರು ಮಾತ್ರ ರೋಗಿಗಳನ್ನು ಬೆಡ್ ಮೇಲೆ ಶಿಫ್ಟ್‌ ಮಾಡಿಲ್ಲ. ಇದರಿಂದ ರೋಗಿಗಳು ನೆಲದ ಮೇಲೆ ನರಳಾಡುತ್ತಿರುವ ದೃಶ್ಯ ಸಹ ನೋಡುಗರಿಗೆ ಮನ ಕಲಕುವಂತಿತ್ತು.

ಮೈಸೂರು ವಿವಿ ಮಹತ್ವದ ನಿರ್ಧಾರ: ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ

ABOUT THE AUTHOR

...view details