ಕರ್ನಾಟಕ

karnataka

ETV Bharat / state

3ನೇ ಅಲೆಯಲ್ಲಿ ಎಚ್ಚೆತ್ತ ಹಾವೇರಿ ಜಿಲ್ಲಾಡಳಿತ: ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ - ಕೋವಿಡ್​-19 ಮೂರನೇ ಅಲೆ

ಹಾವೇರಿ ಜಿಲ್ಲೆಯಲ್ಲಿ ಕೋವಿಡ್​-19 ಎರಡನೇ ಅಲೆಯಲ್ಲಿ ಮರಣ ದರ ಹೆಚ್ಚಿತ್ತು. ರೋಗಿಗಳಿಗೆ ಬೇಕಿದ್ದ ಆಮ್ಲಜನಕ ಸರಿಯಾದ ಪ್ರಮಾಣದಲ್ಲಿ ಸಿಗದ ಕಾರಣ ಹೆಚ್ಚು ಸಾವು ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದ್ದವು. ಹೀಗಾಗಿ, ಇದೀಗ ಜಿಲ್ಲಾಡಳಿತ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಿದೆ.

ಆಮ್ಲಜನಕ ಉತ್ಪಾದನಾ ಘಟಕ
ಆಮ್ಲಜನಕ ಉತ್ಪಾದನಾ ಘಟಕ

By

Published : Jan 9, 2022, 6:53 AM IST

ಹಾವೇರಿ: ಕೊರೊನಾ ಎರಡನೇ ಅಲೆ ವೇಳೆ ಅತಿ ಹೆಚ್ಚು ಮರಣ ಪ್ರಮಾಣ ಇರುವ ಜಿಲ್ಲೆಗಳಲ್ಲಿ ಹಾವೇರಿ ಮೊದಲ ಸ್ಥಾನದಲ್ಲಿತ್ತು. ಈ ಕುರಿತಂತೆ ಪರಿಣಿತರ ತಂಡ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸಾವಿಗೆ ಕಾರಣ ಪತ್ತೆ ಹಚ್ಚುವ ಕಾರ್ಯ ಮಾಡಿತ್ತು. ಹೀಗಾಗಿ, ಮೂರನೇ ಅಲೆಯಲ್ಲಿ ಎಚ್ಚೆತ್ತ ಜಿಲ್ಲಾಡಳಿತ ಇದೀಗ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಿದೆ.

ಎರಡನೇ ಅಲೆಯ ಸಂದರ್ಭದಲ್ಲಿ ರೋಗಿಗಳಿಗೆ ಬೇಕಿದ್ದ ಆಮ್ಲಜನಕ ಸರಿಯಾದ ಪ್ರಮಾಣದಲ್ಲಿ ಸಿಗದ ಕಾರಣ ಹೆಚ್ಚು ಸಾವು ಸಂಭವಿಸಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ, ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ನಿಮಿಷಕ್ಕೆ 500 ಲೀಟರ್ ಆಮ್ಲಜನಕ ಉತ್ಪಾದಿಸುವ ಎರಡು ಘಟಕಗಳು ಕಾರ್ಯಾರಂಭಿಸಿವೆ. ಸರತಿಯಂತೆ ಒಂದು ಘಟಕ 12 ಗಂಟೆ ಕಾರ್ಯ ನಿರ್ವಹಿಸಿದ ನಂತರ ಎರಡನೇ ಘಟಕ ಮುಂದಿನ 12 ಗಂಟೆ ಕೆಲಸ ಮಾಡುತ್ತದೆ. ಹೀಗಾಗಿ, ದಿನದ 24 ಗಂಟೆ ನಿಮಿಷಕ್ಕೆ 500 ಲೀಟರ್ ಆಮ್ಲಜನಕ ರೋಗಿಗಳಿಗೆ ಸಿಗುತ್ತದೆ.


ಆಮ್ಲಜನಕ ಉತ್ಪಾದನಾ ಘಟಕ ಆರಂಭವಾದ ನಂತರ ಪ್ರಾಯೋಗಿಕ ಪರೀಕ್ಷೆ ಮಾಡಲಾಯಿತು. ಈ ವೇಳೆ ಘಟಕಗಳು ನಿಗದಿಪಡಿಸಿದ ಒತ್ತಡದಲ್ಲಿ ಆಮ್ಲಜನಕ ಪೂರೈಸುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ತೀವ್ರ ಉಸಿರಾಟವಿರುವ ರೋಗಿಗಳಿಗೆ 4.5 ಒತ್ತಡದಲ್ಲಿ ಆಮ್ಲಜನಕ ಬೇಕು. ಆದರೆ, ಘಟಕದಿಂದ ಪೂರೈಕೆಯಾಗುವ ಪೈಪ್‌ಲೈನ್‌ಲ್ಲಿ 3.5 ಒತ್ತಡ ಬರುತ್ತೆ ಎನ್ನಲಾಗುತ್ತಿದೆ. ಉತ್ಪಾದನಾ ಘಟಕದಿಂದ ವಾರ್ಡ್‌ಗಳು ದೂರದಲ್ಲಿದ್ದು, ಆಮ್ಲಜನಕ ವಾರ್ಡ್‌ಗಳಿಗೆ ಪೂರೈಸುವ ಪೈಪ್‌ಲೈನ್ ಹೆಚ್ಚು ಪ್ರಮಾಣದಲ್ಲಿ ಅಂಕುಡೊಂಕಾಗಿದೆ. ಪೈಪ್​ಲೈನ್‌ನಲ್ಲಿ ಅಲ್ಲಲ್ಲಿ ಸೋರಿಕೆಯಾಗುವ ಕಾರಣ ನಿರೀಕ್ಷೆ ಮಾಡಿದಷ್ಟು ಒತ್ತಡ ಪೂರೈಕೆಯಾಗುತ್ತಿಲ್ಲ. ಸಣ್ಣಪುಟ್ಟ ಉಸಿರಾಟದ ತೊಂದರೆಯಿಂದ ಬಳಲುವವರಿಗೆ ಆಮ್ಲಜನಕ ಸಿಗುತ್ತೆ. ಆದರೆ ತೀವ್ರ ಉಸಿರಾಟದ ತೊಂದರೆ ಇರುವ ರೋಗಿಗಳಿಗೆ ಈ ಆಮ್ಲಜನಕದ ಒತ್ತಡ ಸಾಕಾಗುವುದಿಲ್ಲ ಎಂದು ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪರಮೇಶ ಹಾವನೂರು ಮೇಲಧಿಕಾರಿಗಳಿಗೆ ಈ ಕುರಿತಂತೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಾವನೂರು, ಆದಷ್ಟು ಬೇಗ ನಿರೀಕ್ಷಿತ ಪ್ರಮಾಣದ ಒತ್ತಡದಲ್ಲಿ ಆಮ್ಲಜನಕ ಪೂರೈಕೆಯಾಗಲಿದೆ. ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಆಮ್ಲಜನಕ, ರೋಗಿಗಳಿಗೆ ಔಷಧಿ ಮತ್ತು ಬೆಡ್‌ಗಳನ್ನು ಸಿದ್ಧಪಡಿಸಲಾಗಿದೆ. ಆದಷ್ಟು ಬೇಗ ಘಟಕದ ದುರಸ್ತಿ ಕಾರ್ಯವೂ ನಡೆಯಲಿದೆ. ಜಿಲ್ಲಾಸ್ಪತ್ರೆಯಲ್ಲಿ 6 ಸಾವಿರ ಲೀಟರ್ ಸಾಮರ್ಥ್ಯದ ಆಮ್ಲಜನಕ ಸಂಗ್ರಹಗಾರವಿದೆ. ಅದರಲ್ಲೂ ಸಹ ಆಮ್ಲಜನಕ ಸಂಗ್ರಹಿಸಲಾಗುತ್ತದೆ. ವೈದ್ಯಕೀಯ ಆಮ್ಲಜನಕ ಇದಾಗಿದ್ದು, 95 ಪ್ರತಿಶತ ಶುದ್ಧವಾಗಿದೆ ಎಂದು ತಿಳಿಸಿದರು.

ABOUT THE AUTHOR

...view details