ಹಾವೇರಿ: ದೊಡ್ಡ ದೊಡ್ಡ ರಾಜಕೀಯ ನಾಯಕರು, ಸಿನಿಮಾ ನಟ-ನಟಿಯರ ಜನ್ಮದಿನದಂದು ರಕ್ತದಾನ ಶಿಬಿರ ಏರ್ಪಡಿಸುವುದು ಸಾಮಾನ್ಯ. ಆದ್ರೆ ಇಲ್ಲೊಬ್ಬ ವ್ಯಕ್ತಿ ತಾವು ಪ್ರೀತಿಯಿಂದ ಸಾಕಿದ್ದ ಹೋರಿಯ ಹುಟ್ಟಿದ ದಿನದಂದು ರಕ್ತದಾನ ಶಿಬಿರ ಏರ್ಪಡಿಸಿ ಮಾದರಿಯಾದರು.
ಹಾವೇರಿಯ ಕೆರಿಮತ್ತಿಹಳ್ಳಿ ಗ್ರಾಮದ ಸಿದ್ದಲಿಂಗೇಶ್ ವಾಲಿ ಎಂಬವರು 6 ವರ್ಷದ ಹಿಂದೆ ತಮಿಳುನಾಡಿನಿಂದ ಹೋರಿ ಖರೀದಿಸಿದ್ದರು. ಈ ಹೋರಿಯನ್ನು ಖರೀದಿಸಿ ತಂದ ದಿನದಂದೇ ಅದರ ಹುಟ್ಟುಹಬ್ಬ ಎಂದು ಅವರು ಆಚರಿಸುತ್ತಿದ್ದಾರೆ.
‘ಜೀವ ರಾಕ್ಷಸ 220’ ಎಂಬ ಹೆಸರಿನ ಹೋರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರವನ್ನೂ ಏರ್ಪಡಿಸಲಾಗಿತ್ತು. ಬಳಿಕ ಅಭಿಮಾನಿಗಳು ತಂದ 10 ಕೆ.ಜಿ ಕೇಕ್ ಅನ್ನು ಕತ್ತರಿಸಲಾಯಿತು.