ಕರ್ನಾಟಕ

karnataka

ETV Bharat / state

ಸೂಕ್ತ ನಿರ್ವಹಣೆಯಿಲ್ಲದೆ ಸೊರಗುತ್ತಿವೆ ರಾಣೆಬೆನ್ನೂರು ನಗರದ 350 ಉದ್ಯಾನವನಗಳು

ಅಮೃತ ಯೋಜನೆಯಡಿ ರಾಣೆಬೆನ್ನೂರು ನಗರಸಭೆ ಸುಮಾರು 2.37 ಕೋಟಿ ಖರ್ಚು ಮಾಡಿ ನಗರದ ವಿವಿಧೆಡೆ 9 ಉದ್ಯಾನವನಗಳನ್ನು ನಿರ್ಮಾಣ ಮಾಡಿದೆ. ಆದರೆ, ಇವುಗಳ ನಿರ್ವಹಣೆಗೆ ನಗರಸಭೆ ಕೇವಲ ಇಬ್ಬರು ‌ಪಾರ್ಕ್ ಮಾಲಿಗಳನ್ನು ನಿಯೋಜಿಸಿದೆ. 350 ಉದ್ಯಾನವನಗಳಿರುವುದರಿಂದ ಇಬ್ಬರು ‌ಮಾಲಿಗಳು ಪಾರ್ಕ್ ನಿರ್ವಹಣೆ ಮಾಡುವುದು ಅಸಾಧ್ಯ..

ಕಿತ್ತೂರು ಚನ್ನಮ್ಮ ಉದ್ಯನವನ
ಕಿತ್ತೂರು ಚನ್ನಮ್ಮ ಉದ್ಯನವನ

By

Published : Mar 1, 2021, 7:24 AM IST

ರಾಣೆಬೆನ್ನೂರು: ಸೂಕ್ತ ನಿರ್ವಹಣೆಯಿಲ್ಲದೆ ರಾಣೆಬೆನ್ನೂರು ನಗರದ ಸುಮಾರು 350 ಉದ್ಯಾನವನಗಳು ಹಾಳಾಗಿ ಹೋಗಿದ್ದು, ಅಳಿವಿನಂಚಿನಲ್ಲಿವೆ.

ಕಿತ್ತೂರು ಚೆನ್ನಮ್ಮ ಉದ್ಯಾನವನ..

ಸುಮಾರು 1.5 ಲಕ್ಷ ಜನಸಂಖ್ಯೆ ಹೊಂದಿರುವ ರಾಣೆಬೆನ್ನೂರು ನಗರದಲ್ಲಿ 35 ವಾರ್ಡ್​ಗಳಿವೆ. ಪ್ರತಿ ವಾರ್ಡ್​ನಲ್ಲಿ 10ರಿಂದ 20 ಉದ್ಯಾನವನಗಳನ್ನು ನಗರಸಭೆ ನಿರ್ಮಾಣ ಮಾಡಿದೆ. ಆದರೆ, ಉದ್ಯಾನವನ ನಿರ್ಮಾಣ ಮಾಡಿದ ನಂತರ ಸೂಕ್ತ ನಿರ್ವಹಣೆ ಮಾಡದೇ ನಗರಸಭೆ ಅಧಿಕಾರಿಗಳು ನಿರ್ಲಕ್ಯ ತೋರಿದ್ದರಿಂದ ನಗರದ ಉದ್ಯಾನವನಗಳು ಹಾಳಾಗಿ ಹೋಗುತ್ತಿವೆ.

ಅಲ್ಲದೆ ಉಮಾಶಂಕರ ನಗರ, ಬೀರೇಶ್ವರ ನಗರ, ಗೌರಿಶಂಕರ ನಗರದಲ್ಲಿ ಕೆಲವರು ಉದ್ಯಾನವನಗಳನ್ನು ಒತ್ತುವರಿ ಮಾಡಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಅಷ್ಟೇ ಅಲ್ಲ, ಕೆಲವರು ಖಾಲಿ ಬಿದ್ದಿರುವ ಉದ್ಯಾನವನದಲ್ಲಿ ಬಿತ್ತನೆ ಮಾಡಿದ್ದಾರೆ.

ಅಮೃತ ಯೋಜನೆಯಡಿ ರಾಣೆಬೆನ್ನೂರು ನಗರಸಭೆ ಸುಮಾರು 2.37 ಕೋಟಿ ಖರ್ಚು ಮಾಡಿ ನಗರದ ವಿವಿಧೆಡೆ 9 ಉದ್ಯಾನವನಗಳನ್ನು ನಿರ್ಮಾಣ ಮಾಡಿದೆ. ಆದರೆ, ಇವುಗಳ ನಿರ್ವಹಣೆಗೆ ನಗರಸಭೆ ಕೇವಲ ಇಬ್ಬರು ‌ಪಾರ್ಕ್ ಮಾಲಿಗಳನ್ನು ನಿಯೋಜಿಸಿದೆ. 350 ಉದ್ಯಾನವನಗಳಿರುವುದರಿಂದ ಇಬ್ಬರು ‌ಮಾಲಿಗಳು ಪಾರ್ಕ್ ನಿರ್ವಹಣೆ ಮಾಡುವುದು ಅಸಾಧ್ಯ ಎಂದು ನಗರಸಭೆ ಪೌರಾಯಕ್ತರಾದ ಎನ್.ಮಹಾಂತೇಶ್ ತಿಳಿಸಿದ್ದಾರೆ.

ಒತ್ತುವರಿ ತೆರವುಗೊಳಿಸಿ :ನಗರದಲ್ಲಿ ಸುಮಾರು ಉದ್ಯಾನವನಗಳನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಅವುಗಳನ್ನು ತೆರವು ಮಾಡುವಂತೆ ನಗರಸಭೆ ಸದಸ್ಯರು ಆಗ್ರಹಿಸಿದ್ದಾರೆ. ಆದರೆ, ಈವರೆಗೂ ಅಧಿಕಾರಿಗಳು ಪರಿಸರ ಸೌಂದರ್ಯ ಹೆಚ್ಚಿಸುವ ಉದ್ಯಾನವನಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಕಡೆ ಕಿಂಚಿತ್ತೂ ಕಾಳಜಿವಹಿಸುತ್ತಿಲ್ಲ ಎಂಬುದು ಸಾರ್ವಜನಿಕರಿಗೆ ಬೇಸರ ಮೂಡಿಸಿದೆ.

ABOUT THE AUTHOR

...view details