ಕರ್ನಾಟಕ

karnataka

ETV Bharat / state

ನೀತಿ ಸಂಹಿತೆ ಇದ್ರೂ ಮದ್ಯ ಸಾಗಣೆ ಯತ್ನ: ಹಿರೇಕೆರೂರಿನಲ್ಲಿ 12 ಸಾವಿರ ಲೀಟರ್ ಬಿಯರ್ ವಶ! - ಹಿರೇಕೆರೂರಿನಲ್ಲಿ ಮದ್ಯ ವಶ

12 ಸಾವಿರ ಲೀಟರ್ ಬಿಯರ್ ವಶಪಡಿಸಿಕೊಂಡ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ನಡೆದಿದೆ.

12 ಸಾವಿರ ಲೀಟರ್ ಬಿಯರ್ ವಶಕ್ಕೆ ಪಡೆದ ಪೊಲೀಸರು

By

Published : Nov 22, 2019, 6:46 PM IST

ಹಾವೇರಿ:ನಿಗದಿತ ಮಾರ್ಗ ಬದಲಾಯಿಸಿ ಸಾಗಿಸುತ್ತಿದ್ದ 12 ಸಾವಿರ ಲೀಟರ್ ಬಿಯರ್ ವಶಪಡಿಸಿಕೊಂಡ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ನಡೆದಿದೆ.

12 ಸಾವಿರ ಲೀಟರ್ ಬಿಯರ್ ವಶಕ್ಕೆ ಪಡೆದ ಪೊಲೀಸರು

ಮೈಸೂರಿನಿಂದ ಧಾರವಾಡ ಪಾನೀಯ ನಿಗಮಕ್ಕೆ ಮದ್ಯವನ್ನ ಸಾಗಿಸಲಾಗುತ್ತಿತ್ತು. ಆದರೆ ವಾಹನ ಚಾಲಕ ಮಾರ್ಗ ಬದಲಾಯಿಸಿ ಹಿರೇಕೆರೂರು ಮಾರ್ಗವಾಗಿ ಸಾಗಿಸುತ್ತಿದ್ದ ಕಾರಣ ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯವನ್ನ ವಶಪಡಿಸಿಕೊಂಡಿದ್ದಾರೆ.

ಹಿರೇಕೆರೂರಿನಲ್ಲಿ ಉಪಚುನಾವಣೆ ನೀತಿ ಸಂಹಿತೆ ಇರುವ ಕಾರಣ ಹಿರೇಕೆರೂರು ತಾಲೂಕಿನ ಹಳ್ಳೂರು ಗ್ರಾಮದ ಬಳಿ ಮದ್ಯ ವಶಪಡಿಸಿಕೊಳ್ಳಲಾಗಿದೆ. ನೀತಿಸಂಹಿತೆ ಮುಗಿದ ಮೇಲೆ ಮದ್ಯ ಮರಳಿ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details