ಕರ್ನಾಟಕ

karnataka

ETV Bharat / state

ಸಾಹಿತ್ಯ ಸಮ್ಮೇಳನದಲ್ಲಿ ದಲಿತರ ಕಡೆಗಣನೆ ಆರೋಪ: ಜೋಷಿ ವಿರುದ್ಧ ದಲಿತ ಮುಖಂಡರ ಆಕ್ರೋಶ - ಈಟಿವಿ ಭಾರತ ಕನ್ನಡ ನ್ಯೂಸ್​​

ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ 86ನೇ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಗೋಷ್ಠಿ ಆಯೋಜನೆ ಮಾಡದೇ ಇರುವುದಕ್ಕೆ ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಷಿ ಅವರನ್ನು ದಲಿತ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದಾರೆ.

outrage-of-dalit-leaders-against-mahesh-joshi
ಸಾಹಿತ್ಯ ಸಮ್ಮೇಳನದಲ್ಲಿ ದಲಿತರ ಕಡೆಗಣನೆ ಆರೋಪ : ಜೋಷಿ ವಿರುದ್ಧ ದಲಿತ ಮುಖಂಡರ ಆಕ್ರೋಶ

By

Published : Dec 29, 2022, 7:14 PM IST

Updated : Dec 29, 2022, 7:49 PM IST

ಸಾಹಿತ್ಯ ಸಮ್ಮೇಳನದಲ್ಲಿ ದಲಿತರ ಕಡೆಗಣನೆ ಆರೋಪ: ಜೋಷಿ ವಿರುದ್ಧ ದಲಿತ ಮುಖಂಡರ ಆಕ್ರೋಶ

ಹಾವೇರಿ:ಅಖಿಲ ಭಾರತ 86ನೇ ಸಾಹಿತ್ಯ ಸಮ್ಮೇಳನದಲ್ಲಿ ದಲಿತರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಷಿ ಅವರನ್ನು ದಲಿತ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಾಧ್ಯಮಗೋಷ್ಠಿ ಮುಗಿಸಿ ಹೊರಡುತ್ತಿದ್ದ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಅವರನ್ನು ತಡೆದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿಯವರೆಗೆ ನಡೆದ ಎಲ್ಲ ಸಾಹಿತ್ಯ ಸಮ್ಮೇಳನದಲ್ಲಿ ದಲಿತಗೋಷ್ಠಿ ಆಯೋಜನೆ ಮಾಡಲಾಗಿತ್ತು. ಆದರೆ, 86ನೇ ಸಾಹಿತ್ಯ ಸಮ್ಮೇಳನದಲ್ಲಿ ದಲಿತಗೋಷ್ಠಿ ಆಯೋಜನೆ ಮಾಡಿಲ್ಲ ಎಂದು ದಲಿತ ಮುಖಂಡರು ಆರೋಪಿಸಿದರು.

ಜೊತೆಗೆ ಕಸಾಪ ಹಾವೇರಿ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ್​ ಅವರ ವಿರುದ್ಧವೂ ಕಿಡಿಕಾರಿದರು. ಇದೊಂದು ಹಣ ಮಾಡುವ ಬೋಗಸ್ ಸಮ್ಮೇಳನ. ದಲಿತ ಸಾಹಿತಿಗಳನ್ನು, ದಲಿತರನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಮಜಾಯಿಸಿ ನೀಡಲು ಬಂದ ಜೋಷಿ ಅವರ ಮಾತನ್ನು ಕೇಳದೇ ದಲಿತ ಮುಖಂಡರು ತರಾಟೆಗೆ ತೆಗೆದುಕೊಂಡರು.

ಸಾಹಿತ್ಯ ಸಮ್ಮೇಳನ :ಜನವರಿ 6, 7 ಮತ್ತು 8 ರಂದು ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಕಾರ್ಯಗಳು ಭರದಿಂದ ಸಾಗುತ್ತಿದೆ. ಹಾವೇರಿ ನಗರದ ಹೊರವಲಯದಲ್ಲಿರುವ ಅಜ್ಜಯ್ಯನ ದೇವಸ್ಥಾನದ ಮುಂದೆ ಬೃಹತ್ ವೇದಿಕೆ ನಿರ್ಮಾಣಗೊಳ್ಳುತ್ತಿದೆ.

ಇದನ್ನೂ ಓದಿ :ಬೀದರ್ ಜಿಲ್ಲಾಧಿಕಾರಿಯ ಅಸಡ್ಡೆಯ ನುಡಿಗಳಿಂದ ಕನ್ನಡದ ಸಮ್ಮೇಳನಕ್ಕೆ ಅವಮಾನ: ಡಾ. ಮಹೇಶ ಜೋಶಿ

Last Updated : Dec 29, 2022, 7:49 PM IST

ABOUT THE AUTHOR

...view details