ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಶಾಸಕ ಎಂ.ಪಿ.ರೇಣುಕಾಚಾರ್ಯ - Outrage against MLA MP Renukaacharya Siddaramaiah ranebennuru

ರಾಜ್ಯದ ಬಿಜೆಪಿ ಸುಭದ್ರ ಸರ್ಕಾರಕ್ಕೆ ಮತದಾರರು 12 ಶಾಸಕರನ್ನು ಆಯ್ಕೆ ಮಾಡಿದ್ದಾರೆ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

Outrage against MLA MP Renukaacharya Siddaramaiah
ಶಾಸಕ ಎಂ.ಪಿ.ರೇಣುಕಾಚಾರ್ಯ

By

Published : Dec 9, 2019, 11:55 PM IST

ರಾಣೆಬೆನ್ನೂರು: ರಾಜ್ಯದ ಬಿಜೆಪಿ ಸುಭದ್ರ ಸರ್ಕಾರಕ್ಕೆ ಮತದಾರರು 12 ಶಾಸಕರನ್ನು ಆಯ್ಕೆ ಮಾಡಿದ್ದಾರೆ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದು, ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಶಾಸಕ ಎಂ.ಪಿ.ರೇಣುಕಾಚಾರ್ಯ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ. 09ಕ್ಕೆ ಸರ್ಕಾರ ಪತನವಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಆದರೆ ಈಗ ಏನಾಯ್ತು ಅಂತ ಅವರೇ ನೋಡಿಕೊಳ್ಳಬೇಕು. ಇನ್ನು ಸಿದ್ದರಾಮಯ್ಯ ಅನರ್ಹರು, ಅನರ್ಹರು ಅಂತಾ ಮಾತಿಗೊಮ್ಮೆ ಹೇಳುತ್ತಿದ್ದರು, ಈಗ ಅನರ್ಹರಲ್ಲ ಅರ್ಹರು ಎಂದು ಜನರ ಮುಂದೆ ಹೇಳಬೇಕಾಗಿದೆ ಎಂದು ಹೇಳಿದರು.

ಮುಂದಿನ 2023 ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿದೆ. ಯಡಿಯೂರಪ್ಪ ಹಾಗೂ ಮೋದಿಯವರ ಆಡಳಿತ ಕಾರ್ಯವೈಖರಿ ನೋಡಿ ಜನತೆ ಬಿಜೆಪಿ ಬೆಂಬಲಿಸುತ್ತಿದ್ದಾರೆ ಎಂದರು.

For All Latest Updates

TAGGED:

ABOUT THE AUTHOR

...view details