ಹಾವೇರಿ: ಉಪ ಚುನಾವಣೆ ಬಗ್ಗೆ ನಾನು ಮೊದಲಿನಿಂದಲೂ ಸೀರಿಯಸ್ ಆಗಿದ್ದೇನೆ. ಜನರ ನಾಡಿಮಿಡಿತ ನನಗೆ ಗೊತ್ತಿದ್ದು, ಎರಡೂ ಚುನಾವಣೆಗಳಲ್ಲಿ ನಾವೇ ಗೆಲ್ಲುತ್ತೇವೆ ಅಂತಾ ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೈ ಎಲೆಕ್ಷನ್ನಲ್ಲಿ ಗೆಲುವು ನಮ್ಮದೇ: ಸಿಎಂ ಬಸವರಾಜ ಬೊಮ್ಮಾಯಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆಗೂ ಮುನ್ನ ಅವರು ಮಾತನಾಡಿದ್ರು. ಗೋಣಿಚೀಲದಲ್ಲಿ ನೋಟು ತಂದು ಹಂಚುತ್ತಿದ್ದಾರೆ ಎಂಬ ಡಿಕೆಶಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಡಿ.ಕೆ.ಶಿವಕುಮಾರ್ ಅನುಭವದ ಮಾತಿದು.
ನಂಜನಗೂಡು ಬೈ ಎಲೆಕ್ಷನ್ನಲ್ಲಿ ನೋಡಿದ್ದೇವೆ, ಅವರಿಗೆ ಗೋಣಿ ಚೀಲದ ಅನುಭವವಿದೆ. ಅವರು ಮಾಡೋದನ್ನ ನಮ್ಮ ಮೇಲೆ ಹೇಳ್ತಿದ್ದಾರಷ್ಟೇ ಎಂದು ತಿರುಗೇಟು ಕೊಟ್ಟರು. ನಾವು ಜನರ ಪ್ರೀತಿ, ವಿಶ್ವಾಸದೊಂದಿಗೆ ಚುನಾವಣೆಗೆ ಎದುರಿಸುತ್ತಿದ್ದೇವೆ, ಅದೇ ನಮಗೆ ಶಕ್ತಿ ಎಂದರು.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಮೆಡಿಕಲ್ ಕಾಲೇಜು ಬೇರೆ ಜಿಲ್ಲೆಗೆ ಹೋಯ್ತು. ಈಗ ಕಾಂಗ್ರೆಸ್ನವರಿಗೆ ಹಾವೇರಿ ಜಿಲ್ಲೆಯ ಮೇಲೆ ಪ್ರೀತಿ ಬರ್ತಿದೆ. ಕಾಂಗ್ರೆಸ್ ಬಣ್ಣದ ಮಾತಿಗೆ ಜನತೆ ಉತ್ತರ ಕೊಡ್ತಾರೆ. ನಾವು ಜನರ ಪ್ರೀತಿ ಗೆಲ್ಲೋಕೆ ನೋಡುತ್ತಿದ್ದೇವೆ ಎಂದು ಹೇಳಿದ್ರು.
ಇದನ್ನೂ ಓದಿ: 'ನನ್ನ ಮಾತಿನಿಂದ ಮೂಲ ಕ್ರೈಸ್ತರಿಗೆ ನೋವಾಗಿದ್ದರೆ ಬಹಿರಂಗ ಕ್ಷಮೆ ಕೋರುತ್ತೇನೆ'
ಹಾನಗಲ್ನಲ್ಲಿ ಬಿಜೆಪಿ ಸೋಲಿಸಿ ಸಿಎಂಗೆ ಮುಜುಗರ ಸೃಷ್ಟಿಗೆ ಕಾಂಗ್ರೆಸ್ ಯತ್ನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಮಗೆ ಜನರ ನಾಡಿಮಿಡಿತ ಗೊತ್ತಿದೆ. ಜನ ನಮ್ಮನ್ನ ಕೈ ಬಿಡಲ್ಲ. ಜನರನ್ನು ನಾವು ಕೈ ಬಿಡಲ್ಲ. ಕಾಂಗ್ರೆಸ್ನವರೇ ಬೆಲೆ ಏರಿಕೆ ಮಾಡಿದ್ದು. ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾಗೆ ಜನರ ಬಳಿ ಹೋಗಿ, ಮಾತನಾಡಿಸಿ ಗೊತ್ತಿಲ್ಲ. ನಾಲ್ಕು ಉಪಚುನಾವಣೆ ಎದುರಿಸಿದ್ದಾರೆ. ರಿಸಲ್ಟ್ ಏನಾಯ್ತು ಅಂತಾ ಅವರನ್ನೇ ಕೇಳಿ ಎಂದು ಕುಹುಕವಾಡಿದರು.