ಹಾವೇರಿ:ಜಿಲ್ಲೆಯಲ್ಲಿಂದು ಮತ್ತೊಂದು ಕೊರೊನಾ ಪ್ರಕರಣ ದೃಢಪಟ್ಟಿದೆ. ಮುಂಬೈನಿಂದ ಬಂದಿದ್ದ 57 ವರ್ಷದ ಕಾರ್ಮಿಕನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಮುಂಬೈನಿಂದ ಹಾವೇರಿಗೆ ಬಂದಿದ್ದ ವ್ಯಕ್ತಿಗೆ ಕೊರೊನಾ: ಜಿಲ್ಲೆಯಲ್ಲಿ 15ಕ್ಕೆ ಏರಿದ ಸೋಂಕಿತರ ಸಂಖ್ಯೆ - corona news
ಮಂಬೈನಿಂದ ಹಾವೇರಿಯ ಶಿಗ್ಗಾಂವಿಗೆ ಅಗಮಿಸಿದ್ದ 57 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಶಿಗ್ಗಾಂವಿ ಪಟ್ಟಣದ ನಿವಾಸಿಯಾದ ಸೋಂಕಿತ ಮೇ 19ರಂದು ಶಿಗ್ಗಾಂವಿಗೆ ಬಂದು ಕ್ವಾರಂಟೈನ್ ಆಗಿದ್ದ ಎನ್ನಲಾಗಿದೆ. ಓಲಾ ಕಾರ್ ಬಾಡಿಗೆ ಮಾಡಿಕೊಂಡು ಪತ್ನಿ ಮತ್ತು ಮಗಳೊಂದಿಗೆ ಸೋಂಕಿತ ಶಿಗ್ಗಾಂವಿಗೆ ಬಂದಿದ್ದ. ಸೋಂಕಿತನನ್ನು ತಾಲೂಕಿನ ಜಕ್ಕಿನಕಟ್ಟಿ ಸರ್ಕಾರಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈತನ ಗಂಟಲು ದ್ರವವನ್ನ ಮೇ 24ರಂದು ಲ್ಯಾಬ್ಗೆ ಕಳಿಸಿಕೊಡಲಾಗಿತ್ತು. ಇದೀಗ ಸೋಂಕು ದೃಢಪಟ್ಟಿದ್ದು, ಈತನನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ 9 ಜನ ಗುಣಮುಖರಾಗಿ ಮನೆಗೆ ತೆರಳಿದ್ದು, 6 ಜನರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.