ಬ್ಯಾಡಗಿ (ಹಾವೇರಿ):ಒಂದೇ ಒಂದು ಕೊರೊನಾ ಪಾಸಿಟಿವ್ ಕೇಸ್‌ಗೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣ ಸ್ಥಬ್ದವಾಗಿದೆ. ಬ್ಯಾಡಗಿ ಪೊಲೀಸ್ ಸ್ಟೇಷನ್ ಕಾನ್ಸ್ಟೆಬಲ್ಗೆ ಕೊರೊನಾ ದೃಢಪಟ್ಟಿದ್ದು, ವಾಣಿಜ್ಯ ನಗರಿ ಬ್ಯಾಡಗಿ ಜನರನ್ನ ಭಯಭೀತಗೊಳಿಸಿದೆ.
ಹಾವೇರಿಯ 5 ತಾಲೂಕುಗಳಿಗೆ ವಕ್ಕರಿಸಿದ ಕೊರೊನಾ ಮೆಣಸಿನಕಾಯಿ ಮಾರುಕಟ್ಟೆಯಿಂದ ವಿಶ್ವಪ್ರಸಿದ್ದಿಯಾಗಿರುವ ಬ್ಯಾಡಗಿಯ ರಸ್ತೆಗಳು ಇದೀಗ ಬೀಕೋ ಎನ್ನುತ್ತಿವೆ. ಕಾನ್ಸ್ಟೆಬಲ್ ಭೇಟಿ ನೀಡಿದ ಪ್ರದೇಶಗಳಲ್ಲಿ ಸ್ವಯಂಘೋಷಿತ ಬಂದಾಗಿವೆ. ಕಾನ್ಸ್ಟೆಬಲ್ ಟ್ರಾವೆಲ್ ಹಿಸ್ಟರಿಯಂತೂ ಎಲ್ಲರನ್ನು ಆತಂಕಕ್ಕೆ ದೂಡಿದೆ.
ಹಾವೇರಿಯ 5 ತಾಲೂಕುಗಳಿಗೆ ವಕ್ಕರಿಸಿದ ಕೊರೊನಾ ಕದರಮಂಡಲಗಿ ನಿವಾಸಿಯಾಗಿರುವ ಪೊಲೀಸ್ ಕಾನ್ಸ್ಟೆಬಲ್ ದಾವಣಗೆರೆ ಬ್ಯಾಡಗಿಯಲ್ಲಿ ಸುಮಾರು ಹೆಚ್ಚು ದಿನಗಳ ಕಾಲ ಅಲೆದಾಡಿದ್ದಾರೆ. ಅಲ್ಲದೆ ಆತನಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳದಿರುವುದು ಜನರನ್ನ ಭಯಭೀತಗೊಳಿಸಿದೆ.
ಹಾವೇರಿಯ 5 ತಾಲೂಕುಗಳಿಗೆ ವಕ್ಕರಿಸಿದ ಕೊರೊನಾ ಕಾನ್ಸ್ಟೆಬಲ್ ಕಾರ್ಯನಿರ್ವಹಿಸುತ್ತಿದ್ದ ಸ್ಟೇಷನ್ ಬಂದ್ ಮಾಡಲಾಗಿದೆ. ಪೊಲೀಸ್ ಸ್ಟೇಷನ್‌ಗೆ ಮಂಗಳವಾರ ಸ್ಯಾನಿಟೈಜರ್ ಮಾಡಲಾಗಿದ್ದು, ಇಲ್ಲಿಗೆ ಬರುವ ಕೇಸ್‌ಗಳು ಕಾಗಿನೆಲೆ ಪೊಲೀಸ್ ಸ್ಟೇಷನ್ ಸಂಪರ್ಕಿಸುವಂತೆ ಬಿತ್ತಿಪತ್ರ ಅಂಟಿಸಲಾಗಿದೆ.
ಹಾವೇರಿಯ 5 ತಾಲೂಕುಗಳಿಗೆ ವಕ್ಕರಿಸಿದ ಕೊರೊನಾ ಗೃಹ ಇಲಾಖೆ ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಸಿಬ್ಬಂದಿಗೆ ಸಹ ಕೊರೊನಾ ಸೋಂಕು ತಗುಲಿದ್ದು, ಅಂತಹ ಸಿಬ್ಬಂದಿ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ. ಅಲ್ಲದೆ ಅವರ ಆರೋಗ್ಯದ ಕಡೆ ಗಮನ ಹರಿಸಲಾಗಿದೆ ಎನ್ನುತ್ತಾರೆ ಗೃಹ ಸಚಿವ ಬಸವರಾಜ ಬೊಮ್ಮಾಯಿ.
ಹಾವೇರಿಯ 5 ತಾಲೂಕುಗಳಿಗೆ ವಕ್ಕರಿಸಿದ ಕೊರೊನಾ ಕಾನ್ಸ್ಟೆಬಲ್ ಭೇಟಿ ನೀಡಿದ ಎನ್ನಲಾದ ತಹಶಿಲ್ದಾರ್ ಕಚೇರಿಯನ್ನೂ ಸಹ ಸೀಲ್ ಡೌನ್ ಮಾಡಲಾಗಿದೆ. ಒಟ್ಟಾರೆಯಾಗಿ ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣ ವಾಣಿಜ್ಯನಗರಿ ಬ್ಯಾಡಗಿಯ ನಿವಾಸಿಗಳನ್ನು ಆತಂಕದಲ್ಲಿ ಬದುಕುವಂತೆ ಮಾಡಿದೆ.