ಹಾವೇರಿ: ಪಾತ್ರೆ ತೊಳೆಯುತ್ತಿದ್ದ ವೃದ್ಧೆ ಮೇಲೆ ಕಾರು ಹರಿದು ಆಕೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ನಡೆದಿದೆ.
ಪಾತ್ರೆ ತೊಳೆಯುತ್ತಿದ್ದ ವೇಳೆ ಮೇಲೆ ಹರಿದ ಕಾರು: ವೃದ್ಧೆ ಸ್ಥಳದಲ್ಲೇ ಸಾವು - old women died by car accident in Haveri
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ಕಾರೊಂದು ನಿಯಂತ್ರಣ ತಪ್ಪಿ ವೃದ್ಧೆಯ ಮೇಲೆ ಹರಿದಿದ್ದು, ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಪಾತ್ರೆ ತೊಳೆಯುತ್ತಿದ್ದ ವೃದ್ದೆ ಮೇಲೆ ಹರಿದ ಕಾರು
ಮೃತ ವೃದ್ಧೆಯನ್ನ ಮಾಳವ್ವ(75) ಎಂದು ಗುರುತಿಸಲಾಗಿದೆ. ಎಂದಿನಂತೆ ಮನೆ ಮುಂದೆ ಪಾತ್ರೆ ತೊಳೆಯುತ್ತಾ ಕುಳಿತ್ತಿದ್ದ ಮಾಳವ್ವಳ ಮೇಲೆ ಹಾವೇರಿಯಿಂದ ಹಾನಗಲ್ ಕಡೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹರಿದಿದೆ. ಪರಿಣಾಮ ಆಕೆ ಮೃತಪಟ್ಟಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಆಡೂರು ಪೊಲೀಸರು ಕಾರು ಚಾಲಕನನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಓದಿ:ಇವರು ಮನುಷ್ಯತ್ವ ಮರೆತರಾ.. ಭಾನಾಮತಿ ಶಂಕೆ ಮೇರೆಗೆ ಒಂದೇ ಕುಟುಂಬದ ಮೂವರಿಗೆ ಥಳಿತ : ವಿಡಿಯೋ ವೈರಲ್