ಹಾವೇರಿ: ತಾಲೂಕಿನ ಗುತ್ತಲದಲ್ಲಿ ಸೋಮವಾರ ಮುಂಜಾನೆ ನಡೆದ ವೃದ್ದನ ಅಂತ್ಯಕ್ರಿಯೆ ಕುರಿತಂತೆ ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಸ್ಪಷ್ಟನೆ ನೀಡಿದ್ದಾರೆ.
ಅಂತ್ಯಕ್ರಿಯೆ ಬಳಿಕ ವೃದ್ಧನ ಕೊರೊನಾ ರಿಪೋರ್ಟ್ ಪಾಸಿಟಿವ್: ಹಾವೇರಿ ಡಿಸಿ ಸ್ಪಷ್ಟನೆ - ವೃದ್ಧನ ಕೊರೊನಾ ರಿಪೋರ್ಟ್ ಪಾಸಿಟಿವ್
ಹಾವೇರಿ ತಾಲೂಕಿನ ಗುತ್ತಲದಲ್ಲಿ ಸೋಮವಾರ ಮುಂಜಾನೆ ನಡೆದ ವೃದ್ದನ ಅಂತ್ಯಕ್ರಿಯೆ ಕುರಿತಂತೆ ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಸ್ಪಷ್ಟನೆ ನೀಡಿದ್ದಾರೆ. ಅಂತ್ಯಕ್ರಿಯೆ ನಂತರ ವೃದ್ಧನ ಕೊರೊನಾ ರಿಪೋರ್ಟ್ ಪಾಸಿಟಿವ್ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತಂತೆ ಕಿಮ್ಸ್ ವೈದ್ಯರು ಯಾವುದೇ ರೀತಿಯ ಮುನ್ಸೂಚನೆ ನೀಡಿರಲಿಲ್ಲ. ಅಲ್ಲದೇ ಸಾವನ್ನಪ್ಪಿದ ವೃದ್ಧನ ಸಾವಿಗೂ ಮುನ್ನ ಕೊರೊನಾ ರಿಪೋರ್ಟ್ ಬಂದಿರಲಿಲ್ಲ. ಹೀಗಾಗಿ ಹಿಂದೂ ವಿಧಿ ವಿಧಾನಗಳಂತೆ ಅಂತ್ಯಕ್ರಿಯೆ ನಡೆಸಲಾಗಿದೆ. ಅಂತ್ಯಕ್ರಿಯೆಯಲ್ಲಿ ಸಂಬಂಧಿಕರು ಮತ್ತು ಸ್ಥಳೀಯರು ಪಾಲ್ಗೊಂಡಿದ್ದರು. ಆದರೆ, ಅಂತ್ಯಕ್ರಿಯೆ ನಂತರ ವೃದ್ಧನ ಕೊರೊನಾ ರಿಪೋರ್ಟ್ ಪಾಸಿಟಿವ್ ಬಂದಿದೆ.
ಇದರಿಂದಾಗಿ ಜಿಲ್ಲಾಡಳಿತ ಈಗಾಗಲೇ 50 ಜನರನ್ನ ಕ್ವಾರಂಟೈನ್ ಮಾಡಿದೆ. ಇನ್ನು ಮುಂದೆ ಜಿಲ್ಲೆಗೆ ಬರುವ ಪ್ರತಿ ಶವದ ಡೀಟೇಲ್ಸ್ ತಿಳಿದುಕೊಂಡ ನಂತರವೇ ಅಂತ್ಯಕ್ರಿಯೆ ವಿಧಾನ ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.