ಹಾವೇರಿ:ಕೊರೊನಾ ಭೀತಿ ನಡುವೆಯೂ ಅನಾಥೆಯ ಅಂತ್ಯ ಸಂಸ್ಕಾರ ಮಾಡಿ ಅಧಿಕಾರಿಗಳು ಮಾನವೀಯತೆ ಮೆರೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಹಾವೇರಿ: ಅನಾಥೆಯ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಅಧಿಕಾರಿಗಳು! - Shiggav in Haveri
ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ಮೃತ್ಯುಂಜಯ ವೃದ್ಧಾಶ್ರಮದಲ್ಲಿದ್ದ ಅನಾಥ ವೃದ್ಧೆಯ ಅಂತ್ಯ ಸಂಸ್ಕಾರ ಮಾಡಿ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ..
ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ಮೃತ್ಯುಂಜಯ ವೃದ್ಧಾಶ್ರಮದಲ್ಲಿದ್ದ ಶಾಂತವ್ವ ಶಿಗ್ಲಿಮಠ(65) ಎಂಬ ವೃದ್ಧೆ ಸಾವನ್ನಪ್ಪಿದ್ದು, ಅಧಿಕಾರಿಗಳು ಮತ್ತು ಸಂಸ್ಥೆ ಸಿಬ್ಬಂದಿ ಸೇರಿ ಪಟ್ಟಣದ ರುದ್ರಭೂಮಿಯಲ್ಲಿ ವಿಧಿ ವಿಧಾನದಂತೆ ಪೂಜೆ ಸಲ್ಲಿಸಿ ಅಂತ್ಯ ಸಂಸ್ಕಾರ ನೆರವೇರಿಸಿದರು. ಜಿಲ್ಲಾ ಹಿರಿಯ ನಾಗರಿಕರ ಮತ್ತು ವಿಕಲಚೇತನ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ ಅವರ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.
ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮೃತ ಶಾಂತವ್ವರ ಕೊರೊನಾ ಪರೀಕ್ಷೆ ಕೂಡ ನಡೆಸಿದ್ದು, ವರದಿ ನೆಗೆಟಿವ್ ಬಂದಿತ್ತು. ಅಂತ್ಯ ಸಂಸ್ಕಾರದಲ್ಲಿ ಸಿಡಿಪಿಒ ಅನಿಲ್ ಹೆಗಡೆ ಹಾಗೂ ಮೃತ್ಯುಂಜಯ ವೃದ್ಧಾಶ್ರಮದ ಸಿಬ್ಬಂದಿ ಭಾಗಿಯಾಗಿದ್ದರು.