ಕರ್ನಾಟಕ

karnataka

ETV Bharat / state

ತಂಬಾಕು ಮಾರಾಟ ಅಂಗಡಿಗಳ ಮೇಲೆ ದಾಳಿ: ದಂಡ ವಸೂಲಿ - undefined

ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿಗಳು ಹಾವೇರಿ ಜಿಲ್ಲೆಯಲ್ಲಿ ತಂಬಾಕು ಮಾರುವ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ.

ತಂಬಾಕು ಮಾರುವ ಅಂಗಡಿಗಳ ಮೇಲೆ ದಾಳಿ

By

Published : May 14, 2019, 8:08 PM IST

ಹಾವೇರಿ: ಜಿಲ್ಲೆಯ ವಿವಿಧೆಡೆ ತಂಬಾಕು ನಿಯಂತ್ರಣ ಅಧಿಕಾರಿಗಳ ತಂಡ ಹಾವೇರಿ ಜಿಲ್ಲೆಯಲ್ಲಿ ತಂಬಾಕು ಮಾರುವ ಅಂಗಡಿಗಳ ಮೇಲೆ ದಾಳಿ ನಡೆಸಿದೆ

ಬ್ಯಾಡಗಿ ನಗರದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿದ ತಂಡ, ತಂಬಾಕು ನಿಯಂತ್ರಣ ಕಾಯ್ದೆ 2003 ಉಲ್ಲಂಘನೆ ಮಾಡಿದ ಮಾಲೀಕರಿಗೆ ಸೂಚನಾ ಪತ್ರ ನೀಡಿದ್ದಾರೆ. 18 ಪ್ರಕರಣಗಳಲ್ಲಿ ಕೋಟ್ಪಾ ಕಾಯ್ದೆ 2003ರ ಕಲಂ 4ರಡಿಯಲ್ಲಿ ರೂ.6000 ದಂಡ ವಸೂಲಿ ಮಾಡಿದೆ.

ಇನ್ನು ದಾಳಿ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಎಂ.ಲಮಾಣಿ, ಜಿಲ್ಲಾ ತಂಬಾಕು ನಿಯಂತ್ರಣ ಸಲಹೆಗಾರ ಡಾ.ಸಂತೋಷ ವಿ.ದಡ್ಡಿ, ತಾಲೂಕು ಆಹಾರ ಸುರಕ್ಷತೆ ಅಧಿಕಾರಿ ರಂಗಣ್ಣ ರಾಥೋಡ್​, ಪೊಲೀಸ್ ಇಲಾಖೆ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details