ಹಾವೇರಿ:ಕಾಂಗ್ರೆಸ್ನವರು ಮಾತ್ರವಲ್ಲ, ಬಿಜೆಪಿಯ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಸಹ ಜೈಲಿಗೆ ಹೋಗುವ ಸಮಯ ಬರುತ್ತದೆ ಎಂದು ಹೇಳುವ ಮೂಲಕ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ. ಅವರು ದುಬೈ ಮತ್ತು ಮಾರಿಷಸ್ನಲ್ಲಿ ಆಸ್ತಿ ಮಾಡಿದ್ದಾರೆ, ಹಾಗಾಗಿ ವಿಜಯೇಂದ್ರ ಆಗಾಗ ಆ ದೇಶಗಳಿಗೆ ಹೋಗಿ ಬರುತ್ತಾರೆ ಎಂದರು.
ಕೆಲವು ಸ್ವಾಮೀಜಿಗಳು 10 ಕೋಟಿ ರೂಪಾಯಿ ಹೊಡೆದು ಮೀಸಲಾತಿ ಹೋರಾಟ ಮಾಡುವುದನ್ನು ಬಿಟ್ಟು ಸುಮ್ಮನಿದ್ದಾರೆ. ಏರ್ ಕಂಡೀಷನ್ ರೂಮಿನಲ್ಲಿ ಕುಳಿತಿದ್ದಾರೆ. ನಮ್ಮ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳಂತೆ ಎಂದೂ ಕಟ್ಟಕಡೆಯ ಹಳ್ಳಿಗೆ ಹೋಗಿ ಹೋರಾಟ ಮಾಡಿಲ್ಲ. ಯಡಿಯೂರಪ್ಪ ಮಠಕ್ಕೆ ಹತ್ತು ಕೋಟಿ ನೀಡಿರುವ ಅನುದಾನದಲ್ಲಿ ಸಹ ಅವ್ಯವಹಾರವಾಗಿದೆ. ಇದನ್ನು ವಿಧಾನಸಭೆ ಕಲಾಪದಲ್ಲಿ ಬಹಿರಂಗಗೊಳಿಸುವುದಾಗಿ ಯತ್ನಾಳ್ ಹೇಳಿದರು.