ಕರ್ನಾಟಕ

karnataka

ETV Bharat / state

ಸಚಿವ ಬೊಮ್ಮಾಯಿ ಅವರೇ, ನಿಮ್ದೇ ಇಲಾಖೆ, ನಿಮ್ದೇ ಜಿಲ್ಲೆ ಪೊಲೀಸರ ಸ್ಥಿತಿ ನಿಮ್ಗೇ ಗೊತ್ತೇನ್ರೀ!? - haveri news

ಜನನಿಬಿಡದ ಪ್ರದೇಶಗಳಲ್ಲಿ ಕೆಲಸ ಮಾಡೋ ಪೊಲೀಸರು ಅನಿವಾರ್ಯವಾಗಿ ರಸ್ತೆ ಬದಿ ಸಿಗೋ ಕಳಪೆ ಗುಣಮಟ್ಟದ ಮಾಸ್ಕ್‌ಗಳನ್ನ ತಮ್ಮ ಹಣ ಕೊಟ್ಟು ಖರೀದಿಸಿ ಹಾಕಿಕೊಂಡು ಕೆಲಸ ಮಾಡ್ತಿದ್ದಾರೆ. ಬಹುತೇಕರಿಗೆ ಗುಣಮಟ್ಟದ ಮಾಸ್ಕ್‌ಗಳ ವಿತರಣೆ ಆಗಿಲ್ಲ. ಪೊಲೀಸರಿಗೆ ಸ್ಯಾನಿಟೈಸರ್, ಹ್ಯಾಂಡ್ ಗ್ಲೋಸ್ ಅನ್ನೋದು ತೀರಾ ಕನಸಿನ ಮಾತು ಎಂಬಂತಾಗಿದೆ.

ನಮ್ಮನ್ನ ಎಚ್ಚರಿಸೋ ಪೊಲೀಸರಿಗೆ ಇಲ್ಲ ಮಾಸ್ಕ್​...
ನಮ್ಮನ್ನ ಎಚ್ಚರಿಸೋ ಪೊಲೀಸರಿಗೆ ಇಲ್ಲ ಮಾಸ್ಕ್​...

By

Published : Apr 2, 2020, 12:10 PM IST

ಹಾವೇರಿ: ಕೊರೊನಾ ಸೋಂಕು ಹರಡೋದನ್ನ ತಡೆಯಲು ಭಾರತ ಲಾಕ್‌ಡೌನ್ ಕರೆ ನೀಡಿ ಒಂಬತ್ತು ದಿನಗಳು ಕಳೆದ್ರೂ ಜನನಿಬಿಡ ಪ್ರದೇಶದಲ್ಲಿ ಕೆಲಸ ನಿರ್ವಹಿಸ್ತಿರೋ ಹಾವೇರಿ ಜಿಲ್ಲೆಯ ಪೊಲೀಸರಿಗೆ ಈವರೆಗೂ ಗುಣಮಟ್ಟದ ಮಾಸ್ಕ್‌ಗಳು ಸಿಗ್ತಿಲ್ಲ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸೋ ಜಿಲ್ಲೆಯ ಪೊಲೀಸರಿಗೆ ಜಿಲ್ಲಾಡಳಿತ ಈವರೆಗೂ ಗುಣಮಟ್ಟದ ಮಾಸ್ಕ್‌ಗಳನ್ನ ವಿತರಿಸಿಲ್ಲ. ಕಾಟಾಚಾರಕ್ಕೆ ಅನ್ನೋ ಹಾಗೆ ಐದಾರು ಗಂಟೆ ಮಾತ್ರ ಉಪಯೋಗ ಮಾಡಬಹುದಾದ ಕಳಪೆ ಗುಣಮಟ್ಟದ ಮಾಸ್ಕ್‌ಗಳನ್ನ ನೀಡಿ ಕೈತೊಳೆದುಕೊಂಡಿದೆ.

ನಮ್ಮನ್ನ ಎಚ್ಚರಿಸೋ ಪೊಲೀಸರಿಗೆ ಇಲ್ಲ ಮಾಸ್ಕ್​..

ಜನನಿಬಿಡದ ಪ್ರದೇಶಗಳಲ್ಲಿ ಕೆಲಸ ಮಾಡೋ ಪೊಲೀಸರು ಅನಿವಾರ್ಯವಾಗಿ ರಸ್ತೆ ಬದಿ ಸಿಗೋ ಕಳಪೆ ಗುಣಮಟ್ಟದ ಮಾಸ್ಕ್‌ಗಳನ್ನ ತಮ್ಮ ಹಣ ಕೊಟ್ಟು ಖರೀದಿಸಿ ಹಾಕಿಕೊಂಡು ಕೆಲಸ ಮಾಡ್ತಿದ್ದಾರೆ. ಬಹುತೇಕರಿಗೆ ಗುಣಮಟ್ಟದ ಮಾಸ್ಕ್‌ಗಳ ವಿತರಣೆ ಆಗಿಲ್ಲ. ಪೊಲೀಸರಿಗೆ ಸ್ಯಾನಿಟೈಸರ್, ಹ್ಯಾಂಡ್ ಗ್ಲೋಸ್ ಅನ್ನೋದು ತೀರಾ ಕನಸಿನ ಮಾತು ಎಂಬಂತಾಗಿದೆ. ಒಂದು ವೇಳೆ ಯಾರಾದ್ರೂ ಗುಣಮಟ್ಟದ ಮಾಸ್ಕ್‌ಗಳನ್ನ ಕೊಡಿ ಸರ್ ಅಂತಾ ಜಿಲ್ಲಾ ಮಟ್ಟದ ಅಧಿಕಾರಿಗಳನ್ನ ಕೇಳಿದ್ರೆ ಮಾಸ್ಕ್ ಎಲ್ಲರೂ ಧರಿಸಬೇಕು ಎಂಬ ನಿಯಮವಿಲ್ಲ ಅನ್ನೋ ಆರೋಗ್ಯ ಇಲಾಖೆ ಆಯುಕ್ತರ ಆದೇಶದ ಪ್ರತಿ ನೀಡ್ತಿದ್ದಾರೆ.

ABOUT THE AUTHOR

...view details