ಹಾವೇರಿ:ಜಿಲ್ಲೆಯಲ್ಲಿ ಮಂಗಳವಾರ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. ಜುಲೈ 1ರ ನಂತರ ಇದೇ ಪ್ರಥಮ ಬಾರಿಗೆ ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ.
ಹಾವೇರಿ ಜನರಿಗೆ ಕೊಂಚ ನೆಮ್ಮದಿ ತಂದ ಮಂಗಳವಾರ: 12 ಮಂದಿ ಕೊರೊನಾದಿಂದ ಗುಣಮುಖ - ಹಾವೇರಿ ಕೊರೊನಾ ಪಾಸಿಟಿವ್ ಪ್ರಕರಣ
ಮಂಗಳವಾರ ಹಾವೇರಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. 13 ದಿನಗಳ ನಂತರ ಯಾವುದೇ ಪ್ರಕರಣ ಕಾಣಿಸದಿರುವುದು ಆರೋಗ್ಯ ಇಲಾಖೆಗೆ ಕೊಂಚ ನೆಮ್ಮದಿ ತಂದಿದೆ.
12 ಮಂದಿ ಕೊರೊನಾದಿಂದ ಗುಣಮುಖ
13 ದಿನಗಳ ನಂತರ ಮಂಗಳವಾರ ಯಾವುದೇ ಪ್ರಕರಣ ಕಾಣಿಸದಿರುವುದು ಆರೋಗ್ಯ ಇಲಾಖೆಗೆ ಕೊಂಚ ನೆಮ್ಮದಿ ತಂದಿದೆ. ಕೋವಿಡ್ ಆಸ್ಪತ್ರೆಯಿಂದ ಮಂಗಳವಾರ 12 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೂ 308 ಕೊರೊನಾ ಪ್ರಕರಣ ದೃಢಪಟ್ಟಿದ್ದು ಅದರಲ್ಲಿ 182 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದು, 7 ಜನ ಸಾವನ್ನಪ್ಪಿದ್ದಾರೆ. ಉಳಿದಂತೆ 119 ಜನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.