ಕರ್ನಾಟಕ

karnataka

ETV Bharat / state

ಇದು ಆಶಾದಾಯಕ.. ಶಾಲೆಗಳು ಆರಂಭವಾದ ನಂತರ ಶಿಕ್ಷಕರು, ಸಿಬ್ಬಂದಿಗೆ ತಾಗಿಲ್ಲ ಕೊರೊನಾ

ಜಿಲ್ಲೆಯಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿ ಸೇರಿ 2,665 ಮಂದಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ಅವರೆಲ್ಲರ ವರದಿ ನೆಗೆಟಿವ್​ ಬಂದಿವೆ..

ddpi andanappa vadageri
ಡಿಡಿಪಿಐ ಅಂದಾನಪ್ಪ ವಡಗೇರಿ

By

Published : Jan 3, 2021, 6:36 AM IST

Updated : Jan 3, 2021, 7:39 AM IST

ಹಾವೇರಿ: ಶಾಲೆಗಳು ಆರಂಭವಾದ ನಂತರ ಆಶಾದಾಯಕ ಬೆಳವಣಿಗೆ ಎಂಬಂತೆ ಶಿಕ್ಷಕರು ಮತ್ತು ಸಿಬ್ಬಂದಿ ಸೇರಿ ಜಿಲ್ಲೆಯಲ್ಲಿ ಯಾರಿಗೂ ಕೂಡ ಕೊರೊನಾ ಪಾಸಿಟಿವ್ ಆಗಿಲ್ಲ ಎಂದು ಹಾವೇರಿ ಡಿಡಿಪಿಐ ಅಂದಾನಪ್ಪ ವಡಗೇರಿ ಮಾಹಿತಿ ನೀಡಿದರು.

ಹೊಸ ವರ್ಷದ ದಿನದಂದು ರಾಜ್ಯಾದ್ಯಂತ ಶಾಲಾ-ಕಾಲೇಜುಗಳನ್ನು ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ ತೆರೆಯಲಾಯಿತು. ಜಿಲ್ಲೆಯಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿ ಸೇರಿ 2,665 ಮಂದಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ಅವರೆಲ್ಲರ ವರದಿ ನೆಗೆಟಿವ್​ ಬಂದಿವೆ.

ಈ ಸುದ್ದಿಯನ್ನೂ ಓದಿ:ಪ್ರೀತಿಸಿ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆ ನೇಣಿಗೆ ಶರಣು

ಇನ್ನು, ಶಾಲೆಗಳು ಆರಂಭಕ್ಕೂ ಮೂರು ದಿನ ಮೊದಲು ಶಿಗ್ಗಾಂವಿ ತಾಲೂಕಿನ ಓರ್ವ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಶಿಕ್ಷಕ ಹಾಗೂ ಅವರ ಕುಟುಂಬದವರನ್ನು ಕ್ವಾರಂಟೈನ್ ಮಾಡಲಾಗಿಸದೆ.

Last Updated : Jan 3, 2021, 7:39 AM IST

ABOUT THE AUTHOR

...view details