ಕರ್ನಾಟಕ

karnataka

ETV Bharat / state

ಸಿಎಂ ತವರು ಜಿಲ್ಲೆಯಲ್ಲೇ ಆ್ಯಂಬುಲೆನ್ಸ್​ಗಳ ಕೊರತೆ.. ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ದೇವರೇ ಗತಿ! - ಹಾವೇರಿ ಸುದ್ದಿ

ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲೇ ಆ್ಯಂಬುಲೆನ್ಸ್​ಗಳ ಕೊರತೆ ಇದ್ದು, ಅತ್ಯಾಧುನಿಕ ಸೌಕರ್ಯವಿರುವ ಕನಿಷ್ಠ ಮೂರು ಆ್ಯಂಬುಲೆನ್ಸ್​​ಗಳನ್ನು ಜಿಲ್ಲಾಸ್ಪತ್ರೆಗೆ ನೀಡುವಂತೆ ಇಲ್ಲಿನ ವೈದ್ಯರು ಒತ್ತಾಯಿಸಿದ್ದಾರೆ.

No ambulance in Haveri district Hospital
ಸಿಎಂ ತವರು ಜಿಲ್ಲೆಯಲ್ಲೇ ಆ್ಯಂಬುಲೆನ್ಸ್​ಗಳ ಕೊರತೆ, ವೈದ್ಯರ ಮನವಿ

By

Published : Nov 16, 2021, 12:56 PM IST

ಹಾವೇರಿ:ಇಲ್ಲಿನ ಜಿಲ್ಲಾಸ್ಪತ್ರೆಗೆ ಪ್ರತಿದಿನ 200-300 ರೋಗಿಗಳು ಆಗಮಿಸುತ್ತಾರೆ. ಅದರಲ್ಲಿ ಕಡಿಮೆಯಾದರೂ 10ಕ್ಕೂ ಅಧಿಕ ರೋಗಿಗಳ ಸ್ಥಿತಿ ಗಂಭೀರವಾಗಿರುತ್ತದೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಇಲ್ಲಿ ವೈದ್ಯರು ದಾವಣಗೆರೆ ಮತ್ತು ಹುಬ್ಬಳ್ಳಿ ಆಸ್ಪತ್ರೆಗಳಿಗೆ ಶಿಫಾರಸು ಮಾಡುತ್ತಾರೆ. ಆದರೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ದಾವಣಗೆರೆ ಮತ್ತು ಹುಬ್ಬಳ್ಳಿಗೆ ಕರೆದೊಯ್ಯಲು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಆ್ಯಂಬುಲೆನ್ಸ್​ಗಳೇ ಇಲ್ಲ.

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ (Haveri District Hospital) ತನ್ನದೇ ಆದ ಒಂದೇ ಒಂದು ಆ್ಯಂಬುಲೆನ್ಸ್ ಇಲ್ಲ. ಈ ಹಿಂದೆ ನೀಡಿದ್ದ ವಾಹನಗಳು ಕೆಟ್ಟು ತಾಂತ್ರಿಕ ಕಾರಣಗಳಿಂದ ಮೂಲೆ ಸೇರಿವೆ. ಇದರ ಪರಿಣಾಮವಾಗಿ ಹಾವು ಕಡಿತಕ್ಕೊಳಗಾದವರು, ಹೃದಯಾಘಾತ ಮತ್ತು ಹೆರಿಗೆಗಾಗಿ ಬಂದವರು ಜೀವ ಕೈಯಲ್ಲಿ ಹಿಡಿದು ದೂರದ ಆಸ್ಪತ್ರೆಗಳಿಗೆ ಹೋಗಬೇಕಿದೆ. ಸದ್ಯಕ್ಕೆ ನಗು ಮಗು ಆ್ಯಂಬುಲೆನ್ಸ್ ಬಳಕೆಯಾಗುತ್ತಿದ್ದು, ಅದರಲ್ಲಿಯೂ ಸಮರ್ಪಕ ವೆಂಟಿಲೇಟರ್ ಇಲ್ಲ.

ಹಾವೇರಿ ಜಿಲ್ಲಾಸ್ಪತ್ರೆಯ ಅವಾಂತರ

ಹೀಗಾಗಿ ದೂರದ ಆಸ್ಪತ್ರೆಗೆ ಸೇರಬೇಕಾದ ರೋಗಿಗಳು ದಾರಿಮಧ್ಯದಲ್ಲಿ ಅಸುನೀಗುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಅವರ ತವರಿನ ಜಿಲ್ಲಾಸ್ಪತ್ರೆಯಲ್ಲಿ ಈ ಅವ್ಯವಸ್ಥೆ ಇರುವ ಕಾರಣಕ್ಕೆ ಸ್ವತಃ ವೈದ್ಯರೇ ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮ ಜಿಲ್ಲಾಸ್ಪತ್ರೆಯಲ್ಲಿ ಕನಿಷ್ಠ ಮೂಲಭೂತ ಸೌಕರ್ಯ ಇರುವ ಆ್ಯಂಬುಲೆನ್ಸ್​​ಗಳಾದರು ಇರಬೇಕು. ಅತ್ಯಾಧುನಿಕ ಸೌಕರ್ಯವಿರುವ ಕನಿಷ್ಠ ಮೂರು ಆ್ಯಂಬುಲೆನ್ಸ್​​ಗಳನ್ನು ಜಿಲ್ಲಾಸ್ಪತ್ರೆಗೆ ನೀಡುವಂತೆ ವೈದ್ಯರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಕುರಿತಂತೆ ಜಿಲ್ಲಾಸ್ಪತ್ರೆಯ ವೈದ್ಯರನ್ನ ಕೇಳಿದರೆ ಅವರು ಜಿಲ್ಲಾಸ್ಪತ್ರೆಯಲ್ಲಿರುವ ಆ್ಯಂಬುಲೆನ್ಸ್​ಗಳ ಕೊರತೆಯನ್ನು ಒಪ್ಪಿಕೊಳ್ಳುತ್ತಾರೆ. ಜಿಲ್ಲಾಸ್ಪತ್ರೆಗೆ ಅಂತಲೇ ಕನಿಷ್ಠ ಎರಡು ಆ್ಯಂಬುಲೆನ್ಸ್​ಗಳು ಬೇಕು . ಈ ಕುರಿತಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:ಕುಡಿದ ಅಮಲಿನಲ್ಲಿ ಪತ್ನಿ ಕೊಲೆ: ನೇಣು ಹಾಕಿ ಆತ್ಮಹತ್ಯೆ ಎಂದು ಪತಿ ಹೈಡ್ರಾಮ

ABOUT THE AUTHOR

...view details