ಕರ್ನಾಟಕ

karnataka

ETV Bharat / state

ಮುನಿರತ್ನರನ್ನು ಸಿಎಂ ಸಮಾಧಾನ ಮಾಡಿದ್ದಾರೆ: ನೂತನ‌ ಸಚಿವ ಆರ್. ಶಂಕರ್ - Haveri Latest News

ಕೆಲ ಅತೃಪ್ತ ಶಾಸಕರು ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ನೂತನ‌ ಸಚಿವ ಆರ್. ಶಂಕರ್, ಸಿಎಂ ಯಡಿಯೂರಪ್ಪ ಅವರು ಕೊಟ್ಟ ಮಾತಿಗೆ ತಪ್ಪುವ ವ್ಯಕ್ತಿಯಲ್ಲ. ಯಡಿಯೂರಪ್ಪನವರು ಮುನಿರತ್ನ ಅವರನ್ನು ಕರೆಸಿ ಸಮಾಧಾನ ಮಾಡಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದರು.

new-minister-r-shankar-statement-about-munirathna
ನೂತನ‌ ಸಚಿವ ಆರ್.ಶಂಕರ್

By

Published : Jan 15, 2021, 12:18 PM IST

Updated : Jan 15, 2021, 12:35 PM IST

ರಾಣೇಬೆನ್ನೂರು (ಹಾವೇರಿ): ಮುಖ್ಯಮಂತ್ರಿ ಯಡಿಯೂರಪ್ಪನವರು ಮುನಿರತ್ನ ಅವರನ್ನು ಕರೆಸಿ ಸಮಾಧಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ನೂತನ‌ ಸಚಿವ ಆರ್.ಶಂಕರ್​ ಹೇಳಿದ್ದಾರೆ.

ಮುನಿರತ್ನರನ್ನು ಸಿಎಂ ಸಮಾಧಾನ ಮಾಡಿದ್ದಾರೆ: ನೂತನ‌ ಸಚಿವ ಆರ್. ಶಂಕರ್

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರು ಕೊಟ್ಟ ಮಾತಿಗೆ ತಪ್ಪುವ ವ್ಯಕ್ತಿಯಲ್ಲ. ಮುನಿರತ್ನ ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ. ಯಡಿಯೂರಪ್ಪನವರು ಅವರನ್ನು ಕರೆಸಿ ಸಮಾಧಾನ ಮಾಡಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದರು.

ಓದಿ:ಸಿಡಿ ಇದ್ರೆ ಬಿಡುಗಡೆ ಮಾಡಲಿ.. ಯೋಗೇಶ್ವರಗೆ ಸಾಲ ನೀಡಿಲ್ಲ; ಸಚಿವ ಎಂಟಿಬಿ ನಾಗರಾಜ್

ಇನ್ನು, ಬಿಜೆಪಿ ಪಕ್ಷದಲ್ಲಿ ಮೂಲ ಮತ್ತು ವಲಸಿಗರು ಎಂಬ ಮಾತಿಲ್ಲ. ನಾವೆಲ್ಲಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇವೆ. ಈ ಬಗ್ಗೆ ನಾನು ಹೇಳಿಕೆ ನೀಡುವುದಿಲ್ಲ ಎಂದರು.

Last Updated : Jan 15, 2021, 12:35 PM IST

ABOUT THE AUTHOR

...view details