ಹಾವೇರಿ:ಲಾಕ್ಡೌನ್ ಹಿನ್ನಲೆ ಜನರು ಸಾರ್ವಜನಿಕ ಸ್ಥಳಗಳಲ್ಲಿ ಕುಳಿತುಕೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ಅಲ್ಲಲ್ಲಿ ಸುಟ್ಟ ಆಯಿಲ್ ಸುರಿಯುತ್ತಿದ್ದಾರೆ.
ಹೂಲಿಕಟ್ಟಿ ಗ್ರಾಮದಲ್ಲಿ ಜನರು ಹರಟೆ ಹೊಡೆಯುವುದನ್ನು ತಡೆಯಲು ಹೊಸ ಐಡಿಯಾ - ಶಿಗ್ಗಾಂವಿ ತಾಲೂಕಿನ ಹೂಲಿಕಟ್ಟಿ ಗ್ರಾಮ
ಲಾಕ್ಡೌನ್ ಹಿನ್ನೆಲೆ ಜನ ಎಲ್ಲೆಂದರಲ್ಲಿ ಕುಳಿತು ಹರಟೆ ಹೊಡೆಯುವುದನ್ನ ತಡೆಯಲು ಹೂಲಿಕಟ್ಟಿ ಗ್ರಾಮದ ಹಿರಿಯರು ಹೊಸದೊಂದು ಐಡಿಯಾ ಮಾಡಿದ್ದಾರೆ.
![ಹೂಲಿಕಟ್ಟಿ ಗ್ರಾಮದಲ್ಲಿ ಜನರು ಹರಟೆ ಹೊಡೆಯುವುದನ್ನು ತಡೆಯಲು ಹೊಸ ಐಡಿಯಾ New Idea for the public to not go out Hoolikatti village](https://etvbharatimages.akamaized.net/etvbharat/prod-images/768-512-6603148-thumbnail-3x2-haveri---copy.jpg)
ಹೂಲಿಕಟ್ಟಿ ಗ್ರಾಮದಲ್ಲಿ ಸಾರ್ವಜನಿಕರು ಹೊರಬರಬಾರದೆಂದು ಹೊಸ ಐಡಿಯಾ
ಶಿಗ್ಗಾಂವಿ ತಾಲೂಕಿನ ಹೂಲಿಕಟ್ಟಿ ಗ್ರಾಮ
ಹೌದು, ಕೊರೊನಾ ಸೋಂಕು ಹರಡುವುದನ್ನ ತಡೆಯಲು ಭಾರತ ಲಾಕ್ಡೌನ್ ಕರೆ ನೀಡಿದರೂ ಕೂಡಾ ಅನಗತ್ಯವಾಗಿ ಕೆಲವರು ಮನೆ ಬಿಟ್ಟು ಸಾರ್ವಜನಿಕ ಸ್ಥಳಗಳಲ್ಲಿ ಬಂದು ಕುಳಿತುಕೊಳ್ಳುತ್ತಿದ್ದರು. ಇದನ್ನ ತಡೆಯಲು ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಹಿರಿಯರು ಹೊಸದೊಂದು ಐಡಿಯಾ ಮಾಡಿದ್ದಾರೆ. ಗ್ರಾಮದಲ್ಲಿರುವ ಹೋಟೆಲ್, ಕಟ್ಟೆಗಳು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಯಾರೂ ಹೊರಗೆ ಬಂದು ಕೂರದಂತೆ ಸುಟ್ಟ ಆಯಿಲ್ ಸುರಿಯುತ್ತಿದ್ದಾರೆ. ಗ್ರಾಮದ ಹಿರಿಯರ ಈ ಐಡಿಯಾದಿಂದ ಜನರು ಮನೆ ಬಿಟ್ಟು ಹೊರಗೆ ಬಂದು ಕುಳಿತುಕೊಳ್ಳುವುದಕ್ಕೂ ಬ್ರೇಕ್ ಬಿದ್ದಂತಾಗಿದೆ.