ಹಾವೇರಿ: ಜಿಲ್ಲೆಯ ಅಗ್ನಿಶಾಮಕ ದಳ ಮತ್ತು ತುರ್ತುಸೇವೆಗಳ ವಿಭಾಗಕ್ಕೆ ಇದೀಗ ಹೊಸ ಉಪಕರಣಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ನಗರದ ವಿವಿಧಡೆ ಅವುಗಳ ಉಪಯೋಗದ ಕುರಿತು ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ನೀಡುತ್ತಿದೆ.
ಹಾವೇರಿ ಜಿಲ್ಲೆಗೆ ಬಂದಿವೆ ಹೊಸ ಅಗ್ನಿಶಾಮಕ ಉಪಕರಣಗಳು - demonstration
ಅಗ್ನಿಶಾಮಕ ದಳ ಮತ್ತು ತುರ್ತುಸೇವೆಗಳ ವಿಭಾಗಕ್ಕೆ ಹೊಸ ಉಪಕರಣಗಳು ಬಂದಿದ್ದು, ಅವುಗಳ ಕುರಿತು ಜಿಲ್ಲೆಯಲ್ಲಿ ಪ್ರಾತ್ಯಕ್ಷಿಕೆ ನೀಡಲಾಯಿತು.
fire-weapons
ನಗರದ ರೈಲು ನಿಲ್ದಾಣದ ಬಳಿ ಇಲಾಖೆ ನೂತನ ಉಪಕರಣಗಳ ಕುರಿತಂತೆ ಜನರಿಗೆ ಅರಿವು ಮೂಡಿಸುವ ಕಾರ್ಯ ನಡೆಯಿತು. ಕಟ್ಟಡಗಳಲ್ಲಿ ಅಗ್ನಿ ಅವಘಡಗಳಾದಾಗ ಬಳಸಬಹುದಾದ ಉಪಕರಣಗಳನ್ನು ಪ್ರದರ್ಶಿಸಲಾಯ್ತು.
ಅಲ್ಲದೇ ಸಾರ್ವಜನಿಕರಿಗೆ ಪ್ರಾಥಮಿಕ ಚಿಕಿತ್ಸೆ ಕುರಿತಂತೆಯೂ ತಿಳಿಸಲಾಯಿತು. ಇದೇ ವೇಳೆ ನೀರಿನಲ್ಲಿ ಮುಳುಗಿದವರ ರಕ್ಷಣೆ ಕುರಿತಂತೆ ತಿಳುವಳಿಕೆ ಮೂಡಿಸಲಾಯಿತು.