ಹಾವೇರಿ: ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ ಆದರೆ ಸಚಿವ ಸ್ಥಾನ ಸಿಗದಿರುವುದಕ್ಕೆ ನಾನೇನು ಸಂಕುಚಿತವಾಗಿಲ್ಲ ಎಂದು ಹಾವೇರಿ ಶಾಸಕ ನೆಹರು ಓಲೇಕಾರ್ ತಿಳಿಸಿದ್ದಾರೆ.
ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಿಲ್ಲ: ನೆಹರು ಓಲೇಕಾರ್ - ನೆಹರು ಓಲೇಕಾರ್
ನನಗೆ ನನ್ನ ಕ್ಷೇತ್ರ ಅಭಿವೃದ್ಧಿಯಾಗಬೇಕು, ಸಚಿವ ಸ್ಥಾನ ಸಿಗದಿರುವುದಕ್ಕೆ ಹತಾಶನಾಗಿಲ್ಲ ಎಂದು ಶಾಸಕ ನೆಹರು ಓಲೇಕಾರ್ ಹೇಳಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು ಸಚಿವ ಸ್ಥಾನ ಸಿಗದಿದ್ದಕ್ಕೆ ನಾನು ಹತಾಶನಾಗಿಲ್ಲ ಮುಂದೆ ಇನ್ನು ಸಮಯವಿದೆ ಅವಕಾಶ ಸಿಗಬಹುದು ಎಂದು ಆಶಾಭಾವನೆ ವ್ಯಕ್ತಪಡಿಸಿದರು. ಸಚಿವರಾದವರು ಉತ್ತಮ ಕೆಲಸ ಮಾಡಲಿ ಎಂದು ನೂತನ ಸಚಿವರಿಗೆ ಶುಭ ಹಾರೈಸಿದರು.
ಬಲಗೈ ಸಮುದಾಯದ ಬಹುದಿನದ ಬೇಡಿಕೆ ನನಗೆ ಸಚಿವ ಸ್ಥಾನ ಸಿಗುವುದಾಗಿತ್ತು. ಆದರೆ ಎಲ್ಲರಿಗೂ ಸಚಿವ ಸ್ಥಾನ ನೀಡಲು ಆಗುವುದಿಲ್ಲ ಬಾಕಿ ಇರುವ ಸಚಿವ ಸ್ಥಾನದಲ್ಲಿ ನನಗೆ ಅವಕಾಶ ಸಿಕ್ಕರೆ ಸಿಗಬಹುದು ಎಂದು ತಿಳಿಸಿದರು. ನನಗೆ ನನ್ನ ಕ್ಷೇತ್ರ ಅಭಿವೃದ್ಧಿಯಾಗಬೇಕು ಅಷ್ಟೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದರು ಅದನ್ನ ನಿರ್ವಹಿಸುವೆ ಎಂದು ಓಲೇಕಾರ್ ತಿಳಿಸಿದರು.