ಕರ್ನಾಟಕ

karnataka

ETV Bharat / state

ಸಿಎಂ ಬಿಎಸ್​​ವೈ, ಸಿದ್ದರಾಮಯ್ಯ ಶೀಘ್ರ ಗುಣಮುಖರಾಗಲಿ: ಶಾಸಕ ನೆಹರು ಓಲೇಕಾರ - ಮುಖ್ಯಮಂತ್ರಿ ಯಡಿಯೂರಪ್ಪ ಆರೋಗ್ಯ ವರದಿ

ಸಿಎಂ ಬಿ.ಎಸ್​.ಯಡಿಯೂರಪ್ಪ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೊರೊನಾ ಸೋಂಕಿನಿಂದ ಶೀಘ್ರ ಗುಣಮುಖರಾಗಲಿ ಎಂದು ಹಾವೇರಿ ಶಾಸಕ ನೆಹರು ಓಲೇಕಾರ ಹಾರೈಸಿದರು.

neharu-olekar-wished-cm-yadiyurappa-to-get-wll-soon
ನೆಹರು ಓಲೇಕಾರ

By

Published : Aug 4, 2020, 4:36 PM IST

ಹಾವೇರಿ: ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಕೊರೊನಾ ಸೋಂಕಿನಿಂದ ಬೇಗ ಗುಣಮುಖರಾಗಲಿ ಎಂದು ಹಾವೇರಿ ಶಾಸಕ ನೆಹರು ಓಲೇಕಾರ್ ಹಾರೈಸಿದ್ದಾರೆ.

ಹಾವೇರಿಯಲ್ಲಿ ಎರಡು ವರ್ಷದ ಸಾಧನೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಿಎಂ ಮೊದಲಿನಂತೆ ಕಾರ್ಯನಿರ್ವಹಿಸುವಂತಾಗಲಿ ಮತ್ತು ಪ್ರತಿಪಕ್ಷನಾಯಕ ಸಿದ್ದರಾಮಯ್ಯರೂ ಸಹ ಕೊರೊನಾದಿಂದ ಚೇತರಿಸಿಕೊಳ್ಳಲಿ ಎಂದು ಓಲೇಕಾರ್ ಹಾರೈಸಿದರು.

ಸಿಎಂ ಬಿಎಸ್​​ವೈ, ಸಿದ್ದರಾಮಯ್ಯ ಬೇಗನೆ ಗುಣಮುಖರಾಗಲಿ

ಇದೇ ವೇಳೆ ಡಾ. ಬಾಬುಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ತಮ್ಮನ್ನ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ಕುರಿತಂತೆ ಸಿ.ಎಂ. ಬಿಎಸ್​ವೈ ಅವರನ್ನು ಭೇಟಿಯಾಗಲು ಬೆಂಗಳೂರಿಗೆ ಹೋಗಿದ್ದೆ. ಆದರೆ ಅವರಿಗೆ ಕೊರೊನಾ ಬಂದಿದ್ದರಿಂದ ಭೇಟಿಯಾಗಲು ಸಾಧ್ಯವಾಗಲಿಲ್ಲ. ಹೈಕಮಾಂಡ್ ಯಾವುದೇ ಕೆಲಸ ವಹಿಸಿದರು ನಿಭಾಯಿಸುವೆ. ನಿಗಮ ಮಂಡಳಿ ನೀಡಲಿ ಅಥವಾ ಸಚಿವ ಸ್ಥಾನ ಕೊಟ್ಟರೂ ನಿಭಾಯಿಸುವೆ ಎಂದು ನೆಹರು ಓಲೇಕಾರ್ ತಿಳಿಸಿದರು.

ABOUT THE AUTHOR

...view details