ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸುದ್ದಿ ಹರಡಿದ್ದ ವ್ಯಕ್ತಿಯನ್ನು ಹಾವೇರಿ ಶಾಸಕ ನೆಹರು ಓಲೇಕಾರ್ ತೀವ್ರ ತರಾಟೆಗೆ ತಗೆದುಕೊಂಡರು.
ಕೊರೊನಾ ಬಗ್ಗೆ ಸುಳ್ಳು ಸುದ್ದಿ ಹರಡಿಸಿದ್ದ ವ್ಯಕ್ತಿಗೆ ಕಿವಿ ಹಿಂಡಿದ ಓಲೇಕಾರ್ - haveri Neharu Olekar news
ಹಾವೇರಿ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಶರಣ ಅಂಗಡಿ ಈ ಕುರಿತಂತೆ ಸಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ ಕಳಹಿಸಿದ್ದರು. ಈ ಕುರಿತಂತೆ ಮಾಹಿತಿ ತಿಳಿದುಕೊಂಡ ಶಾಸಕ ಓಲೇಕಾರ್, ವೈದ್ಯರಾಗಿ ನೀವೇ ಈ ರೀತಿ ಮಾಡಿದರೆ ಹೇಗೆ. ನಿಮ್ಮನ್ನು ಈಗ ಸೈಬಲ್ ಠಾಣೆಯವರು ಅರೆಸ್ಟ್ ಮಾಡುತ್ತಾರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಸುಳ್ಳು ಸುದ್ದಿ ಹರಡಿಸಿದ್ದ ವ್ಯಕ್ತಿಗೆ ಓಲೇಕಾರ್ ತರಾಟೆ
ಹಾವೇರಿ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಶರಣ ಅಂಗಡಿ ಈ ಕುರಿತಂತೆ ಸಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ ಕಳುಹಿಸಿದ್ದರು.
ಈ ಕುರಿತಂತೆ ಮಾಹಿತಿ ತಿಳಿದುಕೊಂಡ ಶಾಸಕ ಓಲೇಕಾರ್, ವೈದ್ಯರಾಗಿ ನೀವೇ ಈ ರೀತಿ ಮಾಡಿದರೆ ಹೇಗೆ. ನಿಮ್ಮನ್ನು ಈಗ ಸೈಬಲ್ ಠಾಣೆಯವರು ಅರೆಸ್ಟ್ ಮಾಡುತ್ತಾರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು. ತನ್ನ ತಪ್ಪಿನ ಅರಿವಾಗುತ್ತಿದ್ದಂತೆ ಶರಣ ಅಂಗಡಿ ಕ್ಷಮೆಯಾಚಿಸಿ, ನನ್ನಿಂದ ತಪ್ಪು ಸಂದೇಶ ಹೋಗಿದೆ, ಹೀಗಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿದ ನಂತರ ಶರಣ ಅವರನ್ನು ಕಳುಹಿಸಿಕೊಡಲಾಯಿತು.