ಕರ್ನಾಟಕ

karnataka

ETV Bharat / state

ನೆಹರುಗೆ ಸಚಿವ ಸ್ಥಾನ ಸಿಗೋವರೆಗೂ ಕೆಳಗಿಳಿಯಲ್ಲ: ನೀರಿನ ಟ್ಯಾಂಕ್ ಏರಿ ಕುಳಿತ ಓಲೇಕಾರ್ ಫ್ಯಾನ್ಸ್​ - ನೆಹರು ಓಲೇಕಾರ್

ಬಿಜೆಪಿ ಬಾವುಟ ಹಿಡಿದು, ಟ್ಯಾಂಕ್ ಮೇಲೆ ನಿಂತು ಸಚಿವ ಸ್ಥಾನ ನೀಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಸಚಿವ ಸ್ಥಾನ ಸಿಗೋವರೆಗೂ ನೀರಿನ ಟ್ಯಾಂಕ್ ನಿಂದ ಕೆಳಗೆ ಇಳಿಯೋದಿಲ್ಲ ಎಂದು ಪಟ್ಟು ಹಿಡಿದಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಅವರ ಮನವೊಲಿಸಿ ಕೆಳಗೆ ಇಳಿಸಿದ್ದಾರೆ. ​

neharu-olekar-fans-climbed-water-tank-for-ministerial-post
ನೀರಿನ ಟ್ಯಾಂಕ್ ಏರಿ ಕುಳಿತ ಓಲೇಕಾರ್ ಫ್ಯಾನ್ಸ್​

By

Published : Aug 3, 2021, 7:22 PM IST

Updated : Aug 3, 2021, 7:45 PM IST

ಹಾವೇರಿ:ಶಾಸಕ ನೆಹರು ಓಲೇಕಾರ್‌ಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಅಭಿಮಾನಿಗಳಿಬ್ಬರು ನೀರಿನ ಟ್ಯಾಂಕ್ ಏರಿ ಪ್ರತಿಭಟಿಸಿರುವ ಘಟನೆ ನಡೆದಿದೆ. ನಗರದ ಮುನಿಸಿಪಲ್ ಮೈದಾನದಲ್ಲಿರುವ ಬೃಹತ್ ನೀರಿನ ಟ್ಯಾಂಕ್ ಏರಿದ ಅಭಿಮಾನಿಗಳು ನೆಹರುಗೆ ಸಚಿವ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದರು.

ಸವಣೂರು ತಾಲೂಕು ಹತ್ತಿಮತ್ತೂರಿನ ಚಂದ್ರಶೇಖರ್ ಹಳ್ಳಿಕೇರಿ ಮತ್ತು ಭೀಮನಗೌಡ ಪಾಟೀಲ್ ಟ್ಯಾಂಕ್ ಏರಿದ ಅಭಿಮಾನಿಗಳು. ಹಾವೇರಿ ಶಾಸಕ ನೆಹರು ಓಲೇಕಾರ್‌ ಮೂರು ಬಾರಿ ಶಾಸಕರಾಗಿದ್ದಾರೆ. ಮೂರು ಬಾರಿ ಎಸ್​​​ಸಿ/ಎಸ್​​ಟಿ ಆಯೋಗದ ಅಧ್ಯಕ್ಷರಾಗಿದ್ದು, ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟುಹಿಡಿದು ಕುಳಿತಿದ್ದರು.

ನೀರಿನ ಟ್ಯಾಂಕ್ ಏರಿ ಕುಳಿತ ಓಲೇಕಾರ್ ಫ್ಯಾನ್ಸ್​

ಕೈಯಲ್ಲಿ ನೆಹರು ಓಲೇಕಾರ್ ಭಾವಚಿತ್ರ ಮತ್ತು ಬಿಜೆಪಿ ಬಂಟಿಂಗ್ಸ್ ಹಿಡಿದ ಈ ಅಭಿಮಾನಿಗಳು ನೆಹರುಗೆ ಸಚಿವ ಸ್ಥಾನ ಸಿಗುವ ತನಕ ಟ್ಯಾಂಕ್​ನಿಂದ ಕೆಳಗೆ ಇಳಿಯುವುದಿಲ್ಲಾ ಎಂದು ಪಟ್ಟು ಹಿಡಿದರು. ನಾವು ಟ್ಯಾಂಕ್‌ನ ಮೇಲೆ ಏರಿ ಕುಳಿತಿದ್ದು ಬಿಜೆಪಿ ಹೈಕಮಾಂಡ್‌ಗೆ ಗೊತ್ತಾಗಬೇಕು ಎಂದರು.

ತಹಶೀಲ್ದಾರ್​ ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿದರೆ ಮಾತ್ರ ಕೆಳಗಿಳಿಯುತ್ತೇವೆ ಎಂದು ಪಟ್ಟು ಹಿಡಿದರು. ವಿಷಯ ತಿಳಿಯುತ್ತಿದ್ದಂತೆ ಹಾವೇರಿ ತಹಶೀಲ್ದಾರ್​​ ಗಿರೀಶ್ ಸ್ವಾದಿ ಸ್ಥಳಕ್ಕಾಗಮಿಸಿ ಇಬ್ಬರ ಮನವೊಲಿಸುವಲ್ಲಿ ಯಶಸ್ವಿಯಾದರು. ಅಲ್ಲದೆ ತಮ್ಮ ಬೇಡಿಕೆ ಈಡೇರಲೇಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೇರೆ ರೀತಿಯ ಪ್ರತಿಭಟನೆ ಕೈಗೊಳ್ಳುವುದಾಗಿ ನೆಹರು ಅಭಿಮಾನಿಗಳು ಎಚ್ಚರಿಕೆ ರವಾನಿಸಿದ್ದಾರೆ.

ಓದಿ: ನೆಚ್ಚಿನ ನಾಯಕರಿಗೆ ಸಚಿವಸ್ಥಾನ ನೀಡುವಂತೆ ಅಭಿಮಾನಿಗಳಿಂದ ದೀರ್ಘದಂಡ ನಮಸ್ಕಾರ

Last Updated : Aug 3, 2021, 7:45 PM IST

ABOUT THE AUTHOR

...view details