ಶಾಸಕ ನೆಹರು ಓಲೇಕಾರ್ ಪ್ರತಿಕ್ರಿಯೆ ಹಾವೇರಿ: ಇದೇ 19 ರಂದು ಹಾವೇರಿಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಯ ಹಲವು ಬಿಜೆಪಿ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಹೇಳಿಕೆಗೆ ಹಾವೇರಿ ಶಾಸಕ ನೆಹರು ಓಲೇಕಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸೋಮವಾರ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಬಿಜೆಪಿ ಶಾಸಕರು ಯಾರು ಅವರು ಸಂಪರ್ಕದಲ್ಲಿಲ್ಲಾ. ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಅವರು ಸಂಪರ್ಕದಲ್ಲಿರಬಹುದು ಎಂದು ಶಾಸಕ ಓಲೇಕಾರ್ ವ್ಯಂಗ್ಯವಾಡಿದರು.
ಡಿಕೆಶಿ ಸುಮ್ಮನೆ ಗಿಡಕ್ಕೆ ಕಲ್ಲು ಹೊಡೆದು ನೋಡುತ್ತಾರೆ. ಅದು ಬಿದ್ದರೇ ಬಿತ್ತು ಇಲ್ಲದಿದ್ದರೇ ಹೋಯಿತು ಎನ್ನವ ರೀತಿಯಲ್ಲಿ ಹೇಳಿಕೆ ನೀಡುತ್ತಾರೆ. ಅಲ್ಲದೆ, ಅವರು ಬೆಳಗ್ಗೆ ಒಂದು ತರಹ ಮಾತನಾಡುತ್ತಾರೆ ಸಾಯಂಕಾಲ ಒಂದು ತರಹ ಮಾತನಾಡುತ್ತಾರೆ. ಅವರು ಮಾತನಾಡುವ ಮಾತುಗಳಲ್ಲಿ ಒಂದಕ್ಕೊಂದು ತಾಳೆಯಾಗುವುದಿಲ್ಲಾ. ಹಾವೇರಿ ಜಿಲ್ಲೆಯ ಬಿಜೆಪಿ ಶಾಸಕರು ಯಾರು ಅವರ ಜೊತೆ ಮಾತನಾಡಿದ್ದಾರೋ ಅವರ ಹೆಸರು ಬಹಿರಂಗಪಡಿಸುವಂತೆ ಓಲೇಕಾರ್ ಅವರು ಡಿಕೆಶಿಗೆ ಸವಾಲು ಹಾಕಿದರು.
ಯಾವ ಶಾಸಕರ ಜೊತೆ ಸಂಪರ್ಕದಲ್ಲಿದ್ದಾರೆ ಮತ್ತು ಅವರ ನಡುವೆ ಏನು ಮಾತುಕತೆ ನಡೆದಿದೆ ಎಂಬುದನ್ನು ತಿಳಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿ ಕೇವಲ ರಾಜ್ಯದಲ್ಲಿ ಮಾತ್ರವಲ್ಲಾ, ದೇಶದಲ್ಲಿಯೇ ಮುಂಚೂಣಿಯಲ್ಲಿರುವ ಪಕ್ಷ, ನಾವೆಲ್ಲಾ ಬಿಜೆಪಿಯಲ್ಲಿರಲು ಕಟಿಬದ್ಧರಾಗಿ ಬಂದವರು. ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಹೆಮ್ಮರವಾಗಿ ಬೆಳೆಯುತ್ತಿದೆ. ಕಾಂಗ್ರೆಸ್ ನಾಯಕರೇ ಬಿಜೆಪಿ ಸೇರುತ್ತಿರುವ ಈ ಸಮಯದಲ್ಲಿ ಬಿಜೆಪಿ ಬಿಟ್ಟು ಯಾರಾದರೂ ಕಾಂಗ್ರೆಸ್ ಸೇರುತ್ತಾರೆ ಎಂದರೇ ಅವಲೋಕಿಸಿ ನೋಡಬೇಕಾಗುತ್ತದೆ ಎಂದು ಶಾಸಕ ಓಲೇಕಾರ್ ತಿಳಿಸಿದರು.
ಡಿಕಿಶಿ ಬೇರೆಯವರ ತೇಜೋವಧೆ ಮಾಡಬಾರದು: ಜಿಲ್ಲೆಯಲ್ಲಿರುವ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನುವ ಮಾತು ಸುಳ್ಳು. ಡಿಕೆಶಿ ಮಾತಿಗೆ ಯಾರು ಕಿವಿಗೊಡಬಾರದು, ಯಾರು ಕಾಂಗ್ರೆಸ್ ಸೇರ್ಪಡೆಯಾಗುತ್ತಿಲ್ಲಾ. ನಾನಂತೂ ಮೊದಲೇ ಸಂಪರ್ಕದಲ್ಲಿಲ್ಲಾ ಎಂದು ಶಾಸಕ ನೆಹರು ಓಲೇಕಾರ್ ಸ್ಪಷ್ಟಪಡಿಸಿದರು. ಗಾಳಿ ಮಾತು ಊಹಾಪೋಹದ ಮಾತುಗಳಿಗೆ ಕಿವಿಕೊಡುವುದು ಸೂಕ್ತವಲ್ಲ. ಡಿಕಿಶಿ ಈ ರೀತಿ ಬೇರೆಯವರ ತೇಜೋವದೆ ಮಾಡಬಾರದು. ಜೀವನದಲ್ಲಿ ಬರೀ ತೇಜೋವಧೆ ಮಾಡುತ್ತ ಬಂದಿದ್ದಾರೆ ಎಂದು ಓಲೇಕಾರ್ ಆರೋಪಿಸಿದರು. ಇನ್ನಾದರೂ ಡಿಕೆ ಶಿವಕುಮಾರ್ ತೇಜೋವಧೆ ಮಾಡುವುದನ್ನ ಬಿಡಬೇಕು ಮತ್ತು ಗಾಳಿಮಾತು ಕೈಬಿಡಬೇಕು ಎಂದು ಹೇಳಿದರು.
ಡಿಕೆಶಿ ಸತ್ಯಕ್ಕೆ ಸಮೀಪವಾದ ಮಾತುಗಳನ್ನು ಆಡಬೇಕು: ಒಂದು ಪಕ್ಷದ ರಾಜ್ಯಾಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದು ಗೊತ್ತಿಲ್ಲಾ ಎಂದು ಓಲೇಕಾರ್ ಹರಿಹಾಯ್ದರು. ಇವರನ್ನ ರಾಜ್ಯ ನಾಯಕ ಎನ್ನಲು ಯಾರು ಇಷ್ಟಪಡುವುದಿಲ್ಲಾ. ಡಿಕೆಶಿ ರಾಜ್ಯ ನಾಯಕರು ಎಂದು ಕರೆಸಿಕೊಳ್ಳಬೇಕು ಎಂದರೇ ಮಾತಿನಲ್ಲಿ ಹಿಡಿತವಿರಬೇಕು. ಡಿಕೆಶಿ ಸತ್ಯಕ್ಕೆ ಸಮೀಪವಾದ ಮಾತುಗಳನ್ನಾಡಬೇಕು. ಸುಳ್ಳುಹೇಳುವದರಿಂದ ಅವರ ಗೌರವ ಕಿಮ್ಮತ್ತು ಕಡಿಮೆಯಾಗುತ್ತದೆ. ಈ ರೀತಿ ಕಿಮ್ಮತ್ತು ಕಳೆದುಕೊಳ್ಳುವಂತಹ ಮಾತುಗಳನ್ನ ಮುಂದೆ ಸಹ ಆಡಬಾರದು. ಸುಳ್ಳು ಹೇಳುವಂತಹ ಮಾತುಗಳಿಗೆ ಡಿ.ಕೆ.ಶಿವಕುಮಾರ್ ಕಡಿವಾಣ ಹಾಕಲಿ ಎಂದು ಓಲೇಕಾರ್ ಒತ್ತಾಯಿಸಿದರು.
ಯಾರು ಅಭ್ಯರ್ಥಿಯಾಗಬೇಕು ಎನ್ನುವ ಬಗ್ಗೆ ಸರ್ವೆ ನಡಯುತ್ತಿದೆ: ಬಿಜೆಪಿ ಪಕ್ಷದಲ್ಲಿ ಹೈಕಮಾಂಡ ತೀರ್ಮಾನವೇ ಅಂತಿಮ. ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಬೇಕು ಎನ್ನುವ ಬಗ್ಗೆ ಸರ್ವೆಯಾಗುತ್ತಿದೆ. ಕಳೆದ ಸಲ 16 ಅಭ್ಯರ್ಥಿಗಳು ಅಕಾಂಕ್ಷಿತರಾಗಿದ್ದರು ಈ ಬಾರಿ ಅಕಾಂಕ್ಷಿತರ ಸಂಖ್ಯೆ ಕಡಿಮೆ ಇದೆ. ನಾನು ಈಗಾಗಲೇ ಶಾಸಕನಾಗಿದ್ದೇನೆ ಎಂದು ತಮಗೆ ಟಿಕೆಟ್ ಸಿಗುವ ವಿಶ್ವಾಸವನ್ನ ಓಲೇಕಾರ್ ವ್ಯಕ್ತಪಡಿಸಿದರು. ಕೊನೆಯದಾಗಿ ಹೈಕಮಾಂಡ ಯಾವುದೇ ನಿರ್ಣಯತಗೆದುಕೊಂದರು ಅದಕ್ಕೆ ಬದ್ಧನಾಗಿದ್ದೇನೆ ಎಂದು ಶಾಸಕ ನೆಹರು ಓಲೇಕಾರ್ ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಕೋಲಾರದಿಂದ ಸ್ಪರ್ಧಿಸಿದರೆ ಸಿದ್ದರಾಮಯ್ಯ ಮನೆಗೆ ಹೋಗುವುದು ನಿಶ್ಚಿತ: ಬಿ ಎಸ್ ಯಡಿಯೂರಪ್ಪ