ಹಾನಗಲ್:ತಾಲೂಕಿನ ಕಾಲ್ವೆಕಲ್ಲಾಪೂರ ಗ್ರಾಮದಲ್ಲಿರುವ ಪ್ರಾಥಮಿಕ ಸಹಾಯಕಿಯರ ಆರೋಗ್ಯ ಕೇಂದ್ರ ಬಾಗಿಲು ತೆರೆಯದೆ ಪಾಳುಬಿದ್ದು ದನದ ಕೊಟ್ಟಿಗೆಯಂತಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದ ದುಸ್ಥಿತಿ: ಲಕ್ಷಗಟ್ಟಲೆ ಖರ್ಚು ಮಾಡಿದ್ರೂ ಜನರಿಗಿಲ್ಲ ಸೇವೆ - ಹಾನಗಲ್ ಸುದ್ದಿ
ಸರ್ಕಾರ ಗ್ರಾಮೀಣ ಜನತೆಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಲಕ್ಷಗಟ್ಟಲೆ ಖರ್ಚುಮಾಡಿ ಪ್ರತಿ ಹಳ್ಳಿಗಳಲ್ಲಿ ಪ್ರಾಥಮಿಕ ಸಹಾಯಕಿಯರ ಆರೋಗ್ಯ ಕೇಂದ್ರವನ್ನು ನಿರ್ಮಿಸಿದೆ. ಆದರೆ, ಕಾಲ್ವೆಕಲ್ಲಾಪೂರ ಗ್ರಾಮದಲ್ಲಿರುವ ಪ್ರಾಥಮಿಕ ಕೇಂದ್ರ ಜನತೆಯ ಸೇವೆಗೆ ಲಭ್ಯವಾಗುತ್ತಿಲ್ಲ.
![ಪ್ರಾಥಮಿಕ ಆರೋಗ್ಯ ಕೇಂದ್ರದ ದುಸ್ಥಿತಿ: ಲಕ್ಷಗಟ್ಟಲೆ ಖರ್ಚು ಮಾಡಿದ್ರೂ ಜನರಿಗಿಲ್ಲ ಸೇವೆ primary health centre](https://etvbharatimages.akamaized.net/etvbharat/prod-images/768-512-7329659-550-7329659-1590321280209.jpg)
ಪ್ರಾಥಮಿಕ ಸಹಾಯಕಿಯರ ಆರೋಗ್ಯ ಕೇಂದ್ರ
ಪ್ರಾಥಮಿಕ ಸಹಾಯಕಿಯರ ಆರೋಗ್ಯ ಕೇಂದ್ರ
ಕಳೆದ ಐದು ವರ್ಷಗಳ ಹಿಂದೆ ನಿರ್ಮಾಣವಾದ ಈ ಕೇಂದ್ರ ಇದೀಗ ಸ್ವಚ್ಛತೆ ಇಲ್ಲದೆ ಬಿಕೋ ಎನ್ನುತ್ತಿದೆ. ಸರ್ಕಾರ ಗ್ರಾಮೀಣ ಜನತೆಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಲಕ್ಷಗಟ್ಟಲೆ ಖರ್ಚುಮಾಡಿ ಪ್ರತಿ ಹಳ್ಳಿಗಳಲ್ಲಿ ಪ್ರಾಥಮಿಕ ಸಹಾಯಕಿಯರ ಆರೋಗ್ಯ ಕೇಂದ್ರವನ್ನು ನಿರ್ಮಿಸಿದೆ. ಆದರೆ, ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಾಥಮಿಕ ಕೇಂದ್ರ ಬಾಗಿಲು ತೆರೆದು ಜನರಿಗೆ ಸೇವೆ ನೀಡುವಲ್ಲಿ ವಿಫಲವಾಗಿದೆ.