ಹಾವೇರಿ: ಉಕ್ರೇನ್ ಮೇಲಿನ ರಷ್ಯಾ ನಡೆಸಿದ ದಾಳಿಗೆ ಬಲಿಯಾದ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಉಕ್ರೇನ್ನಲ್ಲಿ ಕನ್ನಡ ಶಾಲು ಧರಿಸಿ ಕನ್ನಡ ಹಾಡಿಗೆ ಹೆಜ್ಜೆ ಹಾಕಿ ಕನ್ನಡಾಭಿಮಾನ ಮೆರೆದಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಹಾವೇರಿ ಹಾಗೂ ಕರ್ನಾಟಕ ಮೂಲದ ಗೆಳೆಯರೊಂದಿಗೆ ಭಾರಿಸು ಕನ್ನಡ ಡಿಂಡಿಮವಾ ಹಾಡಿಗೆ ಹೆಜ್ಜೆ ಹಾಕಿ ತಾಯ್ನಾಡ ಪ್ರೇಮವನ್ನು ಮೆರೆದಿದ್ದರು. ಇದೀಗ ಆ ವಿಡಿಯೋ ಲಭ್ಯವಾಗಿದೆ. ಕರ್ನಾಟಕ, ಭಾರತ ದೇಶ ಬಿಟ್ಟು ಹೊರದೇಶದಲ್ಲೂ ಕನ್ನಡದ ಕಂಪು ಹರಡಿಸುತ್ತಿದ್ದ ಅಪ್ಪಟ ಕನ್ನಡಿಗ ನವೀನ್ ಶೆಲ್ ದಾಳಿಗೆ ಹತನಾಗಿರುವುದು ಇಡೀ ದೇಶಕ್ಕೆ ಆಘಾತಕಾರಿ ವಿಚಾರವಾಗಿದೆ.