ಹಾವೇರಿ:ಇಂದು ಮೃತ ನವೀನ್ ನಿವಾಸಕ್ಕೆ ಉಕ್ರೇನ್ನಿಂದ ಹಿಂದಿರುಗಿದ ಆತನ ಸ್ನೇಹಿತರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಪುತ್ರನ ಬಗ್ಗೆ ಇಲ್ಲ-ಸಲ್ಲದ ಮಾತುಗಳನ್ನು ಆಡದಂತೆ ಮನವಿ ಮಾಡಿದ ನವೀನ್ ತಾಯಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನವೀನ್ ಸೀನಿಯರ್ ಸುಮನ್, ನಾನು ಫೈನಲ್ ಇಯರ್ ಸ್ಟೂಡೆಂಟ್, ನಾನು ಹಾಸ್ಟೆಲ್ ಬಂಕರ್ನಲ್ಲಿದ್ದೆ. ಅಮೀತ್ ಜೊತೆ ನವೀನ್ ಬಂಕರ್ನಲ್ಲಿದ್ದ. ನನ್ನ ತಮ್ಮನ ರೀತಿ ಇದ್ದ. ಕರ್ಫ್ಯೂ ಸಮಯ ಮುಗಿದ ಮೇಲೆ ನವೀನ್ ಹೊರಗೆ ಹೋಗಿದ್ದನು. ಆದರೆ ಕೆಲವೊಂದು ಟ್ರೋಲ್ ಪೇಜ್ಗಳು ಅನಾವಶ್ಯಕವಾಗಿ ಏನೇನು ಹೇಳುತ್ತಿದ್ದಾರೆ. ಹಾಗೇ ಮಾಡಬೇಡಿ ಎಂದು ಮನವಿ ಮಾಡಿದರು.
ನಂತರ ನವೀನ್ ಸ್ನೇಹಿತ ಅಮೀತ್ ಮಾತನಾಡಿ, ನವೀನ್ ನಮ್ಮೊಟ್ಟಿಗೆ ಚೆನ್ನಾಗಿದ್ದ. ನಾನು ಊರಿಗೆ ವಾಪಸ್ಸಾಗಿದ್ದೇನೆ ಎನ್ನುವುದಕ್ಕಿಂತ ನವೀನ್ ನಮ್ಮೊಟ್ಟಿಗೆ ಇಲ್ಲ ಎಂಬ ಬೇಜಾರಿದೆ. ನಾವ್ಯಾರು ನವೀನ್ ಮೃತದೇಹ ನೋಡಿಲ್ಲ. ಅವನ ಕುಟುಂಬದವರು ನೋವಿನಲ್ಲಿದ್ದಾರೆ. ಸರ್ಕಾರದ ಅಧಿಕಾರಿಗಳು ಆದಷ್ಟು ಬೇಗ ನವೀನ್ ಮೃತದೇಹವನ್ನು ಇಲ್ಲಿಗೆ ತರಿಸಲು ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.
ನನ್ನ ಮಗ ಯಾವತ್ತೂ ಊಟಕ್ಕಾಗಿ ಆಸೆ ಪಟ್ಟವನಲ್ಲ. ಬಂದವರೆಲ್ಲ ಊಟ ಯಾಕೆ ತರುವುದಕ್ಕೆ ಹೋದ ಅಂತಾ ಕೇಳುತ್ತಾರೆ. ಆತನ ಸ್ನೇಹಿತರು ಮಲಗಿದ್ದರು. ಅವರಿಗೆ ಊಟ ತರಲು ನವೀನ್ ಹೊರಗೆ ಹೋಗಿದ್ದ. ನನ್ನ ಮಗ ಬಡವರ ಧ್ವನಿಯಾಗಿದ್ದ. ದಯಮಾಡಿ ಯಾರೂ ನವೀನ್ ಯಾಕೆ ಹೊರಗೆ ಹೋಗಿದ್ದ ಎಂದು ಕೇಳಬೇಡಿ ಎಂದು ನವೀನ್ ತಾಯಿ ವಿಜಯಲಕ್ಷ್ಮಿ ಕೈ ಮುಗಿದು ಬೇಡಿಕೊಂಡರು.
ಇದನ್ನೂ ಓದಿ: ಮಾ.12ರಂದು 45 ಲಕ್ಷ ರೈತರ ಮನೆ ಬಾಗಿಲಿಗೆ ಪಹಣಿ, ಜಾತಿ-ಆದಾಯ ಪ್ರಮಾಣಪತ್ರ: ಸಚಿವ ಅಶೋಕ್