ಕರ್ನಾಟಕ

karnataka

ETV Bharat / state

ನಕ್ಷತ್ರ ಹೋರಿಯ ಹುಟ್ಟುಹಬ್ಬ..ಅಭಿಮಾನಿಗಳಿಂದ 13 ಕೆಜಿ ಕೇಕ್​ ಕತ್ತರಿಸಿ ಸಂಭ್ರಮ - ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಿದರು

ಹೋರಿಯ ಮುಂದೆ ಸುಮಾರು ಮೂರು ಅಡಿ ಮತ್ತು ಒಂದೂವರೆ ಅಡಿಯ 13 ಕೆಜಿ ಕೇಕ್ ಇಟ್ಟು ಕಟ್ ಮಾಡಿ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಿದರು.

nakshatra-bull-birthday
ಅಭಿಮಾನಿಗಳಿಂದ 13 ಕೆಜಿ ಕೇಕ್​ ಕತ್ತರಿಸಿ ನಕ್ಷತ್ರ ಹೋರಿಯ ಹುಟ್ಟುಹಬ್ಬ ಆಚರಣೆ

By

Published : Aug 16, 2022, 9:52 AM IST

Updated : Aug 16, 2022, 1:23 PM IST

ಹಾವೇರಿ:75ನೇ ಸ್ವಾತಂತ್ರ್ಯ ದಿನಾಚರಣೆಯಂದೇ ಶಿವಬಸವೇಶ್ವರನಗರದ ಮಹೇಶ್ ಸತ್ಯಪ್ಪನವರ್ ಅವರ ನಕ್ಷತ್ರ ಎನ್ನುವ ಹೋರಿಯೂ ಎಂಟನೇ ವರ್ಷಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು ಸೇರಿ ಹೋರಿಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಹೋರಿಯ ಮುಂದೆ ಸುಮಾರು ಮೂರು ಅಡಿ ಮತ್ತು ಒಂದೂವರೆ ಅಡಿಯ 13 ಕೆಜಿ ಕೇಕ್ ಇಟ್ಟು ಕಟ್ ಮಾಡಿ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಿದರು.

ನಕ್ಷತ್ರ ಹೋರಿಯನ್ನು ಕಾಲ್ಗೆಜ್ಜೆ, ಗಂಟೆ, ಬಲೋನ್ ರಿಬ್ಬನ್ ಮತ್ತು ಜೋಲಾದಿಂದ ಅಲಂಕಾರ ಮಾಡಿ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಹೋರಿಯ ಜನ್ಮದಿನದ ಹಿನ್ನೆಲೆ ಪೋಟೋ ಶೋಟ್ ನಡೆಸಲಾಯಿತು. ನಂತರ ದೇವಸ್ಥಾನಗಳಿಗೆ ಮತ್ತು ಸಿಂದಗಿ ಮಠಕ್ಕೆ ನಕ್ಷತ್ರ ಹೋರಿಯನ್ನು ತಂದು ವಿಶೇಷ ಪೂಜೆ ನೆರವೇರಿಸಲಾಯಿತು. ನಕ್ಷತ್ರ ಹೋರಿ ಹೆಸರಿನಲ್ಲಿ ಅಭಿಷೇಕ ಮತ್ತು ಪೂಜೆ ನೇರವೇರಿಸಲಾಯಿತು.

ಅಭಿಮಾನಿಗಳಿಂದ 13 ಕೆಜಿ ಕೇಕ್​ ಕತ್ತರಿಸಿ ನಕ್ಷತ್ರ ಹೋರಿಯ ಹುಟ್ಟುಹಬ್ಬ ಆಚರಣೆ

ಹಳ್ಳೀಕಾರ್ ತಳಿಯ ನಕ್ಷತ್ರ ಹೋರಿಯನ್ನ ಮಹೇಶ್ ಅವರು ಹಾವೇರಿಯಿಂದ ಎರಡು ವರ್ಷಗಳ ಹಿಂದೆ 96 ಸಾವಿರ ರೂಪಾಯಿ ನೀಡಿ ಖರೀದಿ ಮಾಡಿದ್ದರು. ನಂತರ ನಕ್ಷತ್ರ ಹೋರಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದ ದನ ಬೆದರಿಸುವ ಸ್ಪರ್ಧೆಯಲ್ಲಿ ತನ್ನದೇ ಆದ ಛಾಪು ಮೂಡಿಸಿತ್ತು. ಭಾಗವಹಿಸಿದ ಎಲ್ಲ ಸ್ಪರ್ಧೆಗಳಲ್ಲಿ ಒಂದಲ್ಲ ಒಂದು ಬಹುಮಾನ ತಂದಿದ್ದ ನಕ್ಷತ್ರಕ್ಕೆ ಸಾವಿರಾರು ಅಭಿಮಾನಿಗಳಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ನಕ್ಷತ್ರ ಹೋರಿಗೆ ಸ್ವತಃ ಅಭಿಮಾನಿಗಳೇ ಆಗಮಿಸಿ ಜನ್ಮದಿನದ ಶುಭಾಶಯ ಕೋರಿದರು. ಮಹೇಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಮಹಿಳೆಯರು ನಕ್ಷತ್ರ ಹೋರಿಗೆ ಪೂಜೆ ಸಲ್ಲಿಸಿ ಆರತಿ ಬೆಳಗಿದರು. ಮನುಷ್ಯರ ರೀತಿ ಹೋರಿಯ ಹುಟ್ಟುಹಬ್ಬ ಆಚರಿಸುತ್ತಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ :ವಿದ್ಯಾರ್ಥಿಯ ಬೈಕ್ ಕ್ರೇಜ್..ಕೇಕ್ ಕತ್ತರಿಸಿ ಬರ್ತ್ ಡೇ ಸೆಲೆಬ್ರೇಷನ್: ವಿಡಿಯೋ ವೈರಲ್

Last Updated : Aug 16, 2022, 1:23 PM IST

ABOUT THE AUTHOR

...view details