ಕರ್ನಾಟಕ

karnataka

ETV Bharat / state

ಕುಡಿವ ನೀರಿನ ಟ್ಯಾಂಕ್ ನಿರ್ಮಿಸಿ ಮಾದರಿಯಾದ ನಾಗೇಂದ್ರನಮಟ್ಟಿ ಶಿಕ್ಷಕರು - ಹಾವೇರಿಯ ನಾಗೇಂದ್ರನಮಟ್ಟಿ ಶಾಲೆಯ ಶಿಕ್ಷಕರು

ಹಾವೇರಿಯ ನಾಗೇಂದ್ರನಮಟ್ಟಿ ಶಾಲೆಯ ಐದು ಶಿಕ್ಷಕರು ಶಾಲೆಯಲ್ಲಿ ಶ್ರಮದಾನ ಮಾಡುವ ಮೂಲಕ 10 ಸಾವಿರ ಲೀಟರ್ ಕುಡಿವ ನೀರಿನ ಟ್ಯಾಂಕ್ ನಿರ್ಮಿಸಿ ಉಳಿದ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.

Haveri
ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ಮಾದರಿಯಾದ ನಾಗೇಂದ್ರನಮಟ್ಟಿ ಶಾಲೆಯ ಶಿಕ್ಷಕರು

By

Published : Aug 11, 2020, 8:15 AM IST

ಹಾವೇರಿ: ಕೊರೊನಾ ಲಾಕ್​​ಡೌನ್ ಸಮಯವನ್ನ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಹಾವೇರಿಯ ನಾಗೇಂದ್ರನಮಟ್ಟಿ ಶಾಲೆಯ ಶಿಕ್ಷಕರು ಗಮನ ಸೆಳೆದಿದ್ದಾರೆ.

ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ಮಾದರಿಯಾದ ನಾಗೇಂದ್ರನಮಟ್ಟಿ ಶಾಲೆಯ ಶಿಕ್ಷಕರು

ಶಾಲೆಯ ಐದು ಶಿಕ್ಷಕರು ಶಾಲೆಯಲ್ಲಿ ಶ್ರಮದಾನ ಮಾಡುವ ಮೂಲಕ 10 ಸಾವಿರ ಲೀಟರ್ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ಉಳಿದ ಶಿಕ್ಷಕರಿಗೆ ಮಾದರಿಯಾಗಿದ್ದಾರೆ. ಹಾವೇರಿಯ ನಾಗೇಂದ್ರನಮಟ್ಟಿ ಜಿಲ್ಲಾ ಕೇಂದ್ರದಲ್ಲಿಯೇ ಹಿಂದುಳಿದ ಪ್ರದೇಶ. ಈ ಪ್ರದೇಶದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ನಗರದಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳಿರುವ ಶಾಲೆ. 360ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಈ ಶಾಲೆ ಹಲವು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಅದರಲ್ಲಿ ಕುಡಿಯುವ ನೀರಿನ ಸಮಸ್ಯೆ ಕೂಡ ಒಂದು. ಈ ಸಮಸ್ಯೆ ಅರಿತ ಶಾಲೆಯ ಶಿಕ್ಷಕರು ಲಾಕ್​​​ಡೌನ್ ಸಮಯದಲ್ಲಿ ಶ್ರಮದಾನ ಮಾಡುವ ಮೂಲಕ ಮಕ್ಕಳಿಗೆ ಕುಡಿವ ನೀರಿನ ಟ್ಯಾಂಕ್ ಕಟ್ಟಿದ್ದಾರೆ. ಪೆನ್ನು ಚಾಕ್​​ಪೀಸ್ ಹಿಡಿಯುವ ಕೈಗಳು ಗುದ್ದಲಿ ಸಲಕೆ ಹಿಡಿದು 10 ಸಾವಿರ ಲೀಟರ್ ನೀರು ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಿವೆ.

ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ಮಾದರಿಯಾದ ನಾಗೇಂದ್ರನಮಟ್ಟಿ ಶಾಲೆಯ ಶಿಕ್ಷಕರು

ಶಾಲೆಯಲ್ಲಿ 5 ಜನ ಶಿಕ್ಷಕರಿದ್ದಾರೆ. ಈ ಐದು ಜನ ಸೇರಿಕೊಂಡು ಲಾಕ್​​​ಡೌನ್ ಸಮಯದಲ್ಲಿ ಟ್ಯಾಂಕ್ ನಿರ್ಮಿಸಿದ್ದಾರೆ. ಶಿಕ್ಷಕರ ಈ ಕಾರ್ಯಕ್ಕೆ ಸ್ಥಳೀಯರು ಸಹ ಕೈಜೋಡಿಸಿದ್ದಾರೆ. ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಗೌಂಡಿಯಾಗಿ ಕಾರ್ಯನಿರ್ವಹಿಸುವ ಮೂಲಕ ಟ್ಯಾಂಕ್ ನಿರ್ಮಿಸಿದ್ದಾರೆ.

ಹಾವೇರಿಯ ನಾಗೇಂದ್ರನಮಟ್ಟಿ ಶಾಲೆ
ಇದರಿಂದ ಶಾಲೆಯ ಪ್ರಮುಖ ಸಮಸ್ಯೆ ಇಲ್ಲದಂತಾಗಿದೆ. ಕುಡಿಯುವ ನೀರಿಗಾಗಿ ವಿದ್ಯಾರ್ಥಿಗಳು ಬೇರೆ ಕಡೆ ಹೋಗುವ ಪ್ರಮೇಯ ಇಲ್ಲದಂತಾಗಿದೆ. ಇದರಿಂದ ಶಾಲೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ಸಹ ಹೆಚ್ಚಾಗುತ್ತದೆ ಎನ್ನುತ್ತಾರೆ ಶಿಕ್ಷಕರು. ಶಾಲೆಗೆ ಬಹುತೇಕ ಬಡ ಮತ್ತು ಕೊಳಚೆ ಪ್ರದೇಶದ ಮಕ್ಕಳು ವ್ಯಾಸಂಗಕ್ಕೆ ಬರುತ್ತಾರೆ ಅವರ ನೀರಿನ ದಾಹವನ್ನು ಟ್ಯಾಂಕ್ ತೀರಿಸಲಿದೆ ಎಂಬ ವಿಶ್ವಾಸವನ್ನ ಶಿಕ್ಷಕರು ವ್ಯಕ್ತಪಡಿಸುತ್ತಿದ್ದಾರೆ.

ಅತಿಹೆಚ್ಚು ಮಕ್ಕಳಿರುವ ಈ ಶಾಲೆಗೆ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಶಿಕ್ಷಕರು ಶ್ರಮದಾನವಲ್ಲದೇ ಸ್ವಂತ ಹಣ ಸಹ ಖರ್ಚು ಮಾಡಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಶಾಲೆಗೆ ಶೌಚಾಲಯ ಸಹ ನಿರ್ಮಿಸುವ ಚಿಂತನೆಯಲ್ಲಿದ್ದಾರೆ. ಲಾಕ್​​​ಡೌನ್ ಸಮಯವನ್ನು ಈ ರೀತಿ ಸಹ ಸದುಪಯೋಗಪಡಿಸಿಕೊಳ್ಳಬಹುದು ಎನ್ನುವುದಕ್ಕೆ ನಾಗೇಂದ್ರನಮಟ್ಟಿ ಶಾಲೆಯ ಶಿಕ್ಷಕರು ಇತರರಿಗೆ ಮಾದರಿಯಾಗಿದ್ದಾರೆ.

ABOUT THE AUTHOR

...view details