ಹಾವೇರಿ : ಜಿಲ್ಲೆಯಾದ್ಯಂತ ನಾಗರಪಂಚಮಿ ಹಬ್ಬವನ್ನ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹೊಸ ಉಡುಪುಗಳನ್ನು ಧರಿಸಿ ಭಕ್ತರು ಬೆಳಗ್ಗೆಯಿಂದ ನಾಗಬನಗಳಿಗೆ ತೆರಳಿ ನಾಗದೇವನಿಗೆ ಹಾಲೆರೆಯುತ್ತಿದ್ದಾರೆ.
ಏಲಕ್ಕಿ ನಗರಿಯಲ್ಲಿ ಸಂಭ್ರಮದ ನಾಗರಪಂಚಮಿ.. ಹೆಂಗಳೆಯರಿಂದ ಕಳೆಗಟ್ಟಿದ ನಾಗಬನ..
ಹಾವೇರಿ ಜಿಲ್ಲೆಯಾದ್ಯಂತ ನಾಗರಪಂಚಮಿ ಹಬ್ಬವನ್ನ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಾಗಪ್ಪನಿಗೆ ಕೊಡಬತ್ತಿ, ಕೊಕ್ಕಾಬತ್ತಿ, ಕಣ್ಬಟ್ಟುಗಳಿಂದ ಸಿಂಗರಿಸಿ ಹೆಂಗಳೆಯರು ಕರಿಕೆಯಿಂದ ಹಾಲೆರದರು.
ಜಿಲ್ಲೆಯಾದ್ಯಂತ ನಾಗರಪಂಚಮಿಯ ಸಂಭ್ರಮ
ನಾಗಪ್ಪನಿಗೆ ಕೊಡಬತ್ತಿ, ಕೊಕ್ಕಾಬತ್ತಿ, ಕಣ್ಬಟ್ಟುಗಳಿಂದ ಸಿಂಗರಿಸಿ ಹೆಂಗಳೆಯರು ಕರಿಕೆಯಿಂದ ಹಾಲೆರದರು. ಇದೇ ಸಂದರ್ಭದಲ್ಲಿ ನಾಗಬನಗಳಲ್ಲಿ ಮುತ್ತೈದೆಯರಿಗೆ ಉಡಿ ತುಂಬಿ ಅರಿಶಿಣ-ಕುಂಕುಮ ವಿನಿಮಯ ಮಾಡಿಕೊಂಡರು. ಇನ್ನು ಕೆಲವರು ಮನೆಯಲ್ಲಿ ನಾಗಪ್ಪನನ್ನು ಪ್ರತಿಷ್ಠಾಪಿಸಿ ಹಾಲೆರೆಯುವ ಮೂಲಕ ನಾಗರಂಪಚಮಿ ಆಚರಿಸಿದರು. ಇಡೀಜಿಲ್ಲೆಯಾದ್ಯಂತ ನಾಗರಪಂಚಮಿಯ ಸಂಭ್ರಮ ಮನೆಮಾಡಿದೆ.