ಹಾವೇರಿ:ಜಿಲ್ಲೆಯಾದ್ಯಂತ ನಾಗರ ಪಂಚಮಿ ಸಡಗರ ಮನೆ ಮಾಡಿದೆ. ಇಂದು ರೊಟ್ಟಿ ಪಂಚಮಿ ಆಚರಿಸಲಾಗುತ್ತಿದ್ದು, ಗುರುವಾರ ಮತ್ತು ಶುಕ್ರವಾರ ನಾಗಪ್ಪನಿಗೆ ಹಾಲು ಎರೆಯಲಾಗುತ್ತದೆ.
ಗುರುವಾರ ಮನೆಯಲ್ಲಿ ಮಣ್ಣಿನ ನಾಗಪ್ಪನ ಪೂಜೆಸುವ ಜನರು ನಂತರ ಉಂಡಿ(ಲಾಡು) ಗಳ ನೈವೇದ್ಯ ಹಿಡಿಯುತ್ತಾರೆ. ಇನ್ನು ಕೆಲವರು ಗುರುವಾರ ನಾಗಬನಗಳಿಗೆ ತೆರಳಿ ಕಲ್ಲಿನ ನಾಗಪ್ಪನಿಗೆ ಹಾಲೆರೆಯುತ್ತಾರೆ. ಶುಕ್ರವಾರ ಮನೆಯಲ್ಲಿ ಮಣ್ಣಿನ ನಾಗಪ್ಪನ ಪ್ರತಿಷ್ಠಾಪಿಸಿ ಹಾಲೆರೆಯುತ್ತಾರೆ. ಈ ಹಿನ್ನೆಲೆಯಲ್ಲಿ ಕುಂಬಾರ ಕುಟುಂಬಗಳು ಮಣ್ಣಿನ ನಾಗಪ್ಪನ ಮೂರ್ತಿಗಳನ್ನ ಸಿದ್ದಪಡಿಸಿವೆ.
ನಗರದ ಪ್ರಮುಖ ಮಾರುಕಟ್ಟೆ ರಸ್ತೆಗಳಲ್ಲಿ ಮಣ್ಣಿನ ನಾಗಪ್ಪನ ಮಾರಾಟ ಮಾಡುವ ದೃಶ್ಯಗಳು ಕಂಡು ಬಂದವು. ಮಣ್ಣಿನಿಂದ ಮಾಡಿದ ಬಣ್ಣದ ಅಲಂಕಾರವಿಲ್ಲದ ನಾಗಪ್ಪನ ಮೂರ್ತಿಗಳು, ಒಂದು ಹೆಡೆ ಇರುವ ನಾಗಪ್ಪನ ಮೂರ್ತಿಗಳು, ಐದು ಹೆಡೆ ಇರುವ ನಾಗಪ್ಪನ ಮೂರ್ತಿಗಳನ್ನು ಕುಂಬಾರ ಕುಟುಂಬಗಳು ಮಾರಾಟಮಾಡುತ್ತವೆ.