ರಾಣೆಬೆನ್ನೂರ: ಲಾಕ್ಡೌನ್ ನಡುವೆ ಮುಸ್ಲಿಂ ಬಾಂಧವರು ಮನೆಯಲ್ಲಿ ಪ್ರಾರ್ಥನೆ ಮಾಡುವ ಮೂಲಕ ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸಿದರು.
ರಾಣೆಬೆನ್ನೂರು ನಗರ ಸೇರಿದಂತೆ ತಾಲೂಕಿನ ಮುಷ್ಠೂರು, ಬೆನಕನಕೊಂಡ, ಮೇಡ್ಲೇರಿ ಗ್ರಾಮಗಳಲ್ಲಿ ಮುಸ್ಲಿಂ ಬಾಂಧವರು ಬೆಳಗಿನ ಜಾವ ಪವಿತ್ರ ಮಾಸದ ರೋಜಾ ಮುಗಿಸಿ, ಈದ್ಗಾ ಮೈದಾನಕ್ಕೆ ತೆರಳದೆ ಮನೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಅಕ್ಕಪಕ್ಕದ ಜನತೆಗೆ ಶುಭಾಶಯ ಕೋರಿದರು.
ರಂಜಾನ್ ಆಚರಿಸಿದ ಮುಸ್ಲಿಂ ಬಾಂಧವರು ತಾಲೂಕ ಆಡಳಿತ ಮನವಿಗೆ ಸ್ಪಂದಿಸಿದ ಮುಸ್ಲಿಂ ಬಾಂಧವರು
ಕೊರೊನಾ ಹಿನ್ನೆಲೆ ತಾಲೂಕಾಡಳಿತ, ಪೊಲೀಸ್ ಇಲಾಖೆ ಶಾಂತಿ ಸಭೆ ಮಾಡಿ ರಂಜಾನ್ ಹಬ್ಬದ ಸಮಯದಲ್ಲಿ ಈದ್ಗಾ ಮೈದಾನಕ್ಕೆ ತೆರೆಳದೆ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಮುಸ್ಲಿಂ ಸಮುದಾಯದ ಮುಖಂಡರು, ಮನೆಯಲ್ಲಿ ಪ್ರಾರ್ಥನೆ ಮಾಡುವ ಮೂಲಕ ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸಿದರು.